Jun 12, 2022, 7:30 PM IST
ನವದೆಹಲಿ (ಜೂ. 12): ದೇಶದ ಮೂಲೆ ಮೂಲೆಯಲ್ಲಿ ಹಿಂಸಾಚಾರದ ಹೊಗೆ ಆಡುತ್ತಿದೆ. ಪ್ರತಿಭಟನೆ ಝಳ ಹೆಚ್ಚಾಗ್ತಿದೆ. ಉತ್ತರ ಭಾರತ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ. ಹೌದು, ಶುಕ್ರವಾರದ ಪ್ರಾರ್ಥನೆಯ ನಂತರ ಸುಮಾರು 500 ಪ್ರತಿಭಟನಾಕಾರರು ಜಾಮಾ ಮಸೀದಿ ಮತ್ತು ಸುತ್ತಮುತ್ತ ಜಮಾಯಿಸಿ, ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನ ಕೂಗಿದ್ರು.
ಶಾಂತಿಯುತ ಪ್ರೊಟೆಸ್ಟ್ ಮಾಡ್ತಿವಿ ಅಂದವರು ಕ್ಷಣಾರ್ಧದಲ್ಲಿ ಸಾವಿರಾರು ಮುಸ್ಲಿಮರು ಬೀದಿಗಿಳಿದಿದ್ದರು, ಪ್ರತಿಭಟನೆ ಹೆಸರಲ್ಲಿ ಕಲ್ಲು ತೂರಿ ಶಾಂತಿ ಕದಡುವ ಪ್ಲಾನ್ ಮಾಡಿದ್ರು. ಪ್ರವಾದಿ ಪೈಗಂಬರ್ ವಿರುದ್ದ ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಸ್ಪೋಟವಾಗಿದೆ. ಹಲವು ಕಡೆ ಹಿಂಸಾಚಾರ ಕೂಡ ನಡೆದಿದ್ದು ಪೊಲೀಸರಿಗೆ ಗಾಯ,ಕೆಲವು ಕಡೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ.
ಬಿಹಾರ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಜಾರ್ಖಂಡ್, ಮಹರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಶುಕ್ರವಾರದ ಪ್ರಾರ್ಥನೆ ಸಲ್ಲಿಸಿ ಬೀದಿಗಳಿದ ಮುಸ್ಲಿಂ ಸಮುದಾಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಬಂಧನಕ್ಕೆ ಒತ್ತಾಯ ಮಾಡಿವೆ. ಹಾಗಾದ್ರೆ ಶುಕ್ರವಾರದ ವಾರ್ ಏಕಾಏಕಿ ಭುಗಿಲೇಳಲು ಕಾರಣವೇನು? ಪ್ರೀ ಪ್ಲಾನ್ ಮಾಡಿ ದಂಗೆ ಎದ್ದಿರದ್ರಾ ಮುಸ್ಲಿಮರು? ಇಲ್ಲಿದೆ ರಿಪೋರ್ಟ್
ಇದನ್ನೂ ಓದಿ: Prophet Row: ದೇಶಾದ್ಯಂತ ಪ್ರತಿಭಟನೆ ಹೆಸರಲ್ಲಿ ದಂಗೆ: ಕಲ್ಲು ತೂರಿ, ಬೆಂಕಿ ಹಚ್ಚಿ ನ್ಯಾಯ ಕೇಳಬೇಕಾ?