ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

Published : Mar 19, 2024, 05:24 PM ISTUpdated : Mar 19, 2024, 05:25 PM IST

ಮೊಳಗಿದೆ ರಣಘೋಷ!ಶುರುವಾಗಿದೆ ರಾಜಕೀಯ ಸಂಘರ್ಷ!
ಸಂಚಲನ ಸೃಷ್ಟಿಸಿದೆ ಮೋದಿ ಹೇಳಿದ ಅದೊಂದು ಮಾತು!
ಒಂದೇ ಮಾತಲ್ಲಿ ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮೋದಿ!

ಅಂದು ಪ್ರತಿಜ್ಞೆ ಮಾಡಿದ ಪ್ರಧಾನಿ ಮೋದಿ(Narendra Modi) ಇಂದು ಶಪಥ ತೊಟ್ಟು ಮಾತಾಡಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ(Election) ನಡೆಯಲಿದೆ. ಜೂನ್ 4ಕ್ಕೆ, ನಾವೂ ನೀವು ಅದ್ಯಾರನ್ನ ಪ್ರಧಾನಿ ಮಾಡಲಿದ್ದೀವಿ ಅನ್ನೋ ಗುಟ್ಟು ರಟ್ಟಾಗುತ್ತೆ. ಆದ್ರೆ ಅದಕ್ಕೂ ಮುನ್ನ ಮೋದಿ ಅವರು ಆಡಿದ ಈ ಮಾತುಗಳು, ರಣಕೌತುಕವನ್ನ ಮತ್ತಷ್ಟು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ.. ದೂರದೃಷ್ಟಿಯ ರಾಜಕಾರಣಿ. ದಿಟ್ಟ ನಿರ್ಧಾರಗಳನ್ನ ಕೈಗೊಂಡ ಕೀರ್ತಿ ಈಗ ಅವರ ಪಾಲಿಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾಗಿದೆ. ಅಸಾಧ್ಯ ಅಂದುಕೊಂಡಿದ್ದನ್ನೆಲ್ಲಾ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಅಂಥಾ ಮೋದಿ ಈಗೊಂದು ಭವಿಷ್ಯ ನುಡಿದಿದ್ದಾರೆ.  ಮೋದಿ ಅವರ ಆಡಳಿತ ವೈಖರಿ ನೋಡಿದ ಒಬ್ಬರು, ನೀವು ಯೋಚಿಸ್ತಾ ಇರೋದು ನೋಡಿದ್ರೆ, ಈಗಿನ ಚುನಾವಣೆಗೆ ತಯಾರಾಗ್ತಾ ಇರೋ ಹಾಗೆ ಕಾಣ್ತಾ ಇಲ್ಲ. ಬದಲಾಗಿ, 2029ರ ಲೋಕಸಭಾ ಚುನಾವಣೆಗೆ(Loksabha election) ಸಿದ್ಧಗೊಳ್ತಾ ಇರೋ ಹಾಗೆ ಭಾಸವಾಗ್ತಾ ಇದೆ ಅಂತ ಹೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಮೋದಿ ಅವರು, ನಿಮ್ಮ ತಂಡ 2029ರಲ್ಲೇ ಸ್ಟ್ರಕ್ ಆಗಿದೆ.. ನಾನು 2047ರ ಬಗ್ಗೆ ಕನಸು ಕಾಣ್ತಾ ಇದೀನಿ ಅಂತ ಮೋದಿ ಅವರು ಹೇಳ್ತಾರೆ.. ಅಂದ್ರೆ, ಮೋದಿ ಅವರ ಟಾರ್ಗೆಟ್(Target) ಈ ಎಲೆಕ್ಷನ್ನಲ್ಲಿ 400 ಕ್ಷೇತ್ರಗಳಲ್ಲಿ ಕಮಲ ಅರಳಿಸೋದಲ್ಲ.. 2049ಕ್ಕೆ ವಿಶ್ವವೇದಿಕೆಯಲ್ಲಿ ತಿರಂಗ ಹಾರಿಸೋದು ಅಂತಾಯ್ತು.

ಇದನ್ನೂ ವೀಕ್ಷಿಸಿ:  ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more