Apr 23, 2024, 4:44 PM IST
ಲೋಕಸಭಾ ಸಮರ ಅದಾಗಲೇ ಆರಂಭವಾಗಿದೆ. ಆದ್ರೆ ಅಂತಿಮ ಫಲಿತಾಂಶ ಬರೋ ತನಕ, ಯುದ್ಧದ ತೀವ್ರತೆ ಹೆಚ್ಚಾಗೋ ಲಕ್ಷಣಗಳೂ ಕಾಣ್ತಾ ಇದಾವೆ. ಅದಕ್ಕೆ ಈಗಷ್ಟೇ ಮೋದಿ ಅವರು ಕೊಟ್ಟಿರೋ ಹೇಳಿಕೆನೇ ಉದಾಹರಣೆ. ಕಾಂಗ್ರೆಸ್‌ನ ಪ್ರಣಾಳಿಕೆ, ಕಾಂಗ್ರೆಸ್(Congress) ಮಾಜಿ ಪ್ರಧಾನಿಯ ಹೇಳಿಕೆ, ಇದನ್ನೇ ಇಟ್ಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ ಮೋದಿ(Narendra Modi). ಆದ್ರೆ, ಮೋದಿ ಮಾತಿಗೆ, ಕಾಂಗ್ರೆಸ್ ಕೊಟ್ಟ ಪ್ರತ್ಯುತ್ತರ ಬೇರೆಯದೇ ಕತೆ ಹೇಳ್ತಾ ಇದೆ. ರಾಜಸ್ಥಾನದ(Rajasthan) ಬನ್ಸ್ವಾರದಲ್ಲಿ ಬಿಜೆಪಿ(BJP) ಚುನಾವಣಾ ಸಮಾವೇಶ ನಡೀತಿತ್ತು. ಪ್ರಧಾನಿ ಮೋದಿ ಅವರು ವೇದಿಕೆ ಮೇಲೆ ನಿಂತು ಮಾತಾಡ್ತಾ ಇದ್ರು. ಮಾತಿನ ಮೂಲಕ, ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಟ್ಟಿದ್ರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಅದೊಂದು ವಿಚಾರವನ್ನೇ ಅಸ್ತ್ರವಾಗಿಟ್ಕೊಂಡು, ಎದುರಾಳಿ ಪಾಳಯದ ವಿರುದ್ಧ ಸಿಡಿದೆದ್ದಿದ್ರು. ಕಾಂಗ್ರೆಸ್ ಪಾಳಯ ಮ್ಯಾನಿಫೆಸ್ಟೋ ಮುಂದಿಟ್ಟು ಅಖಾಡ ಪ್ರವೇಶ ಮಾಡ್ತಿದ್ದ ಹಾಗೇ, ಬಿಜೆಪಿ ಅಟ್ಯಾಕಿಂಗ್ ಮೋಡ್‌ಗೆ ಬಂದಾಗಿತ್ತು. ಕಾಂಗ್ರೆಸ್ ವಿರುದ್ಧ ಗುಡುಗೋಕೆ ಆರಂಭಿಸಿತ್ತು. ಕರ್ನಾಟಕದಲ್ಲಿ ಅದೃಷ್ಟ ಖುಲಾಯಿಸಿದ ಗ್ಯಾರಂಟಿನೇ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರ ಅನ್ನೋ ಹಾಗೆ ಕಾಂಗ್ರೆಸ್ ಬಳಸಿತ್ತು. ಕಾಂಗ್ರೆಸ್ ಸಂಪತ್ತಿನ ಸರ್ವೆ ಮಾಡಿದ್ರೆ, ಅದರಲ್ಲಿ ಮಂಗಳಸೂತ್ರವೂ ಸೇರಿಕೊಂಡಿರುತ್ತೆ. ಅದನ್ನೂ ಕೂಡ ರಿಡಿಸ್ಟ್ರಿಬ್ಯೂಟ್ ಮಾಡ್ಬಿಡುತ್ತೆ ಕಾಂಗ್ರೆಸ್ ಅಂದ್ರು ಮೋದಿ. ಅಂದ್ ಹಾಗೆ, ಈ ಸಂಪತ್ತು ಹಂಚಿಕೆಯಾದ್ರೆ, ಬಂಗಾರ ಯಾರ ಪಾಲಾಗುತ್ತೆ ಅಂತ ಹೇಳುವಾಗ ಹೇಳಿದ ಮಾತೇ, ದೇಶದಲ್ಲಿ ದೊಡ್ಡ ಹಲ್ ಚಲ್ ಸೃಷ್ಟಿಸಿರೋದು.
ಇದನ್ನೂ ವೀಕ್ಷಿಸಿ: Devegowda: ಲೋಕಸಭಾ ಚುನಾವಣೆ ವೇಳೆ ಗೌಡರ ಕಣ್ಣೀರು ಅಸ್ತ್ರ! 'ನಾನು ಇನ್ನೇರಡು ವರ್ಷ ಬದುಕಬಹುದು ಅಷ್ಟೇ'