Jun 1, 2024, 4:59 PM IST
ದೇಶದಲ್ಲಿ ಮತಯುದ್ಧ ಮುಗಿಯೋ ಹಂತಕ್ಕೆ ಬಂದು ನಿಂತಿದೆ. ಜೂನ್ 1 ರಂದು ಉಳಿದಿರೋ 7ನೇ ಹಂತ, ಕಡೇ ಹಂತದ ಮತದಾನ ಮುಗಿದರೆ, ಅಲ್ಲಿಗೆ ಮೂರು ತಿಂಗಳು ಸಂಚಲನ ಸೃಷ್ಟಿಸಿದ್ದ ಎಲೆಕ್ಷನ್ ಭರಾಟೆ ಕಂಪ್ಲೀಟ್ ಮುಗಿದ ಹಾಗೆ. ಇದಾದ ಬಳಿಕ, ಜೂನ್ 4ನೇ ತಾರೀಖಿಗೆ, ದೇಶದ ಜನ ಯಾರಿಗೆ ಅಧಿಕಾರ ಕೊಟ್ಟಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ.ಬರೋಬ್ಬರಿ 132 ವರ್ಷಗಳ ಹಿಂದೆ ನಡೆದ ಘಟನೆ ಇದು.ಇಡೀ ಭರತ ಭೂಮಿ ಸಂಚಾರಿಸಿ ಬಂದ ಸಾಧು ಒಬ್ಬರು, ಭಾರತದ ಭೂಶಿರದಂತಿರುವ ಕನ್ಯಾಕುಮಾರಿಯ(Kanyakumari) ಸಮುದ್ರಕ್ಕೆ ಧುಮುಕಿದರು. ಯಮರೂಪಿ ಅಲೆಗಳನ್ನು ಧ್ವಂಸಗೊಳಿಸಿ, ಸಮುದ್ರದ ನಡುವೆ ಇದ್ದ ಬಂಡೆಗಲ್ಲು ತಲುಪಿದರು. ಹಾಗೆ ಧ್ಯಾನಕ್ಕೆ(Meditation) ಕೂತಿದ್ದು ಮತ್ಯಾರೂ ಅಲ್ಲ, ಇವತ್ತಿಗೂ ಯಾರ ಹೆಸರು ಕೇಳಿದ್ರೆ, ಭಾರತೀಯರ ನರನಾಡಿಗಳಲ್ಲಿ ಮಿಂಚಿನ ಸಂಚಾರಚಾಗುತ್ತೋ, ಅಂಥಾ ಸ್ವಾಮಿ ವಿವೇಕಾನಂದರು(Swami Vivekananda). ಪ್ರಧಾನಿ ನರೇಂದ್ರ ಮೋದಿ(Narendra Modi), ವಿವೇಕಾನಂದರು ಅವತ್ತು ಯಾವ ಬಂಡೆಯಲ್ಲಿ ಕೂತು, ಧ್ಯಾನ ಮಾಡಿ ಪರಮಾದ್ಭುತ ದರ್ಶನ ಪಡೆದಿದ್ರೋ, ಅದೇ ಸ್ಥಳದಲ್ಲಿ ಮೋದಿ ಧ್ಯಾನಕ್ಕೆ ಕುಳಿತಿದ್ದಾರೆ.
ಇದನ್ನೂ ವೀಕ್ಷಿಸಿ: ಪ್ರಜ್ಬಲ್ ರೇವಣ್ಣ ವಿರುದ್ಧ ಒಟ್ಟು 3 ಅತ್ಯಾಚಾರ ಕೇಸ್: ವಿಡಿಯೋ ಮಾಡಿದ ಮೊಬೈಲ್ಗಾಗಿ ಎಸ್ಐಟಿ ಹುಡುಕಾಟ!