Dec 25, 2023, 3:15 PM IST
ಲೋಕಸಭಾ ಚುನಾವಣೆಯ ಬಿಸಿ ನಿಧಾನವಾಗಿ ಏರ್ತಾ ಇದೆ. 2024ರಲ್ಲಿ ಭಾರತದ ಗದ್ದುಗೆ ಯಾರ ಪಾಲಾಗಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರವನ್ನ ಸ್ವೀಕರಿಸುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್(Congress) ಹಾಗೂ ಉಳಿದ ಪಕ್ಷಗಳು ಮೈತ್ರಿ ಮಾಡಿಕೊಂಡು ಮೋದಿಯನ್(Narendra modi)ನ ಮಣಿಸೋಕೆ ಸ್ಟ್ರಾಟಜಿ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮೋದಿ ಕಿ ಗ್ಯಾರಂಟಿ(Guarantee) ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಅದು 2014ರ ಲೋಕಸಭಾ ಚುನಾವಣಾ ಸಮಯ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅನ್ನೋ ಹೆಸರು ಬಂದಾಗ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಯಾಗಿತ್ತು. ಯಾಕೆಂದ್ರೆ ಗುಜರಾತ್ ರಾಜ್ಯವನ್ನ ಮೋದಿ ಸಿಎಂ ಆಗಿ ಮುನ್ನೆಡೆಸಿದ್ದು ಹೇಗಿತ್ತು ಅನ್ನೋದನ್ನ ದೇಶ ಕಂಡಿತ್ತು. ಪ್ಯುವರ್ ಆಂಡ್ ಪವರ್ ಫುಲ್ ಲೀಡರ್ ಅನ್ನೋದನ್ನ ಅವರ ರಾಜಕೀಯ ಹಿಸ್ಟರಿ ಹೇಳ್ತಾ ಇತ್ತು. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದರು. ಹೀಗಾಗಿ ಲೋಕಸಮರದಲ್ಲಿ ಮೊದಲ ಬಾರಿ ಮೋದಿ ಗೆದ್ದು ಸಿಎಂ ಇಂದ ಪಿಎಂ ಆದರು. ಮೋದಿ ತಮ್ಮ ಮೇಲೆ ಕಾಂಗ್ರೆಸ್ ನಾಯಕರು ಮಾಡ್ತಾ ಇದ್ದ ಆರೋಪಗಳಿಗೆ ಕಾದು ಹೊಡೆಯುವ ತಂತ್ರವನ್ನ ಮಾಡ್ತಾ ಇದ್ದರು. ಕಾಂಗ್ರೆಸ್ ಮೋದಿಯ ಗೆಲುವನ್ನ ಊಹಿಸಿರ್ಲಿಲ್ಲಾ. ಹೀಗಾಗಿ ರಾಜಕೀಯ ವಿಚಾರದಿಂದ ಹಿಡಿದು ವೈಯಕ್ತಿಕ ವಿಚಾರದ ತನಕ ಕಾಂಗ್ರೆಸ್ ಮೋದಿ ಮೇಲೆ ಟೀಕಾ ಪ್ರಹಾರ ಮಾಡ್ತಾನೇ ಬಂತು. ತನ್ನತ್ತ ಎಸೆದ ಕಲ್ಲುಗಳನ್ನೇ ಒಗ್ಗೂಡಿಸಿಕೊಂಡು ಮೋದಿ ಒಂದು ಕೋಟೆಯನ್ನೇ ಕಟ್ಟಿ ಬಿಟ್ಟರು.
ಇದನ್ನೂ ವೀಕ್ಷಿಸಿ: ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?