ಮೋದಿ ಆಡಳಿತದಲ್ಲಿ ಷೇರು ಮಾರುಕಟ್ಟೆಗೆ ಉತ್ತೇಜನ..! 10ನೇ ಆರ್ಥಿಕತೆಯಿಂದ 5ನೇ ಆರ್ಥಿಕತೆಗೆ ಜಿಗಿದ ಭಾರತ..!

May 27, 2024, 10:09 AM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ(BJP government) ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದಿವೆ. ಮೂರನೇ ಅವಧಿಯ ಅಧಿಕಾರಕ್ಕಾಗಿ ಸ್ಪರ್ಧಿಸಿರುವ ಪ್ರಧಾನಿ ಮೋದಿ(Narendra Modi), ದೇಶದ ಆರ್ಥಿಕತೆಯನ್ನು(Indian Economy) ಹೆಚ್ಚಿಸುವಲ್ಲಿ ತಮ್ಮ ಸರ್ಕಾರದ ಪಾತ್ರವನ್ನು ಒತ್ತಿ ಒತ್ತಿ ಹೇಳ್ತಾರೆ. ಭಾರತ ಬದಲಾಗಿದೆ. ಇದು ಹಳೆಯ ಭಾರತವಲ್ಲ. ವಿಶ್ವದಲ್ಲಿ ತನ್ನದೇ ಛಾಪು ಮೂಡಿಸುತ್ತಿರೋ ನಯಾ ಭಾರತ. ಅಭಿವೃದ್ಧಿ, ಆರ್ಥಿಕವಾಗಿ ಗಟ್ಟಿಯಾಗಿ ನಿಂತ ಭಾರತ. ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರ ಹೊಮ್ಮಿದೆ. ಜಾಗತಿಕ ಸಮಸ್ಯೆಗಳ ನಡುವೆ, ಕೊರೊನಾದಂತ ಕಡುಕಷ್ಟದ ಕಾಲದ ನಂತರ ಇಷ್ಟೊಂದು ವೇಗವಾಗಿ ಜಗತ್ತಿನ ಯಾವ ದೇಶಗಳೂ ಕೂಡ ಸಾಧಿಸಲಾಗದ ಸಾಧನೆಯನ್ನ ಕೇವಲ 10 ವರ್ಷದಲ್ಲಿ ಭಾರತ ಸಾಧಿಸಿದೆ. ಇಷ್ಟೆಲ್ಲಾ ಸಾಧನೆಯ ಹಿಂದಿನ ರುವಾರಿ ಬೇರ್ಯಾರು ಅಲ್ಲ.ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿ.. ಭಾರತದ ಹೆಮ್ಮೆಯ ಹಾಗೂ ಜನಪ್ರಿಯ ಜನನಾಯಕ.. ಭಾರತವನ್ನು ನಂ1 ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಗಳಿರುಳು ಶ್ರಮಿಸುತ್ತಿರುವ ಸಾರಥಿ.. ಗಮನಾರ್ಹ ಪ್ರಗತಿಯ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯ ಭಾರತಕ್ಕೆ ತಂದುಕೊಟ್ಟಿರೋದು ಇದೇ ನರೇಂದ್ರ ಮೋದಿ ಆಡಳಿತ.

ಇದನ್ನೂ ವೀಕ್ಷಿಸಿ:  ಸೂತಕದ ಸಂಡೆ ಮಾಡಿದ ರಸ್ತೆ ಅಪಘಾತಗಳು..! ಬೆಳ್ಳಂಬೆಳಿಗ್ಗೆ ಅಮಾಯಕರ ಬಲಿ ಪಡೆದ ಜವರಾಯ..!