
ಸಂಸದೀಯ ದಳ ನಿರ್ಧರಿಸಿದೆ, ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಿದ್ದೇವೆ ಎಂದು ಬಿಜೆಪಿ ಹೇಳಿತು.
ಬಿಜೆಪಿಗೊಂದು(BJP) ಅವಕಾಶ ಕೊಡಿ. ಒಬ್ಬ ವ್ಯಕ್ತಿಯ ದೃಷ್ಟಿಯಿಂದ ನೋಡದೆ, ಎನ್‍ಡಿಎ(NDA) ಮೈತ್ರಿಕೂಟಕ್ಕೆ ತನ್ನ ಕೆಲಸ ಮಾಡಲು ಅವಕಾಶ ಬೇಕಿದೆ. 2004ರ ನಮ್ಮ ಸೋಲಿಗೆ ಕಾರಣ, ನಮ್ಮಲ್ಲಿದ್ದ ಅತಿಯಾದ ಆತ್ಮವಿಶ್ವಾಸ. ಮತ್ತೊಂದು ಕಾರಣ, ಶೈನಿಂಗ್ ಇಂಡಿಯಾ ಎಂಬ ಘೋಷಣೆ. ಅಡ್ವಾಣಿ(LK Advani) ಗೃಹಮಂತ್ರಿಯಾಗಿದ್ದಾಗಲೇ ಪಾರ್ಲಿಮೆಂಟ್ ಮೇಲೆ, ಲಾಲ್ ಕಿಲಾ ಮೇಲೆ ದಾಳಿಯಾಯ್ತು. ವಿಮಾನ ಅಪಹರಣವಾಯ್ತು. ಜಿನ್ನಾ ಬಗ್ಗೆ ಆತ ಜಾತ್ಯಾತೀತನೆಂಬ ಹೊಸ ಅನ್ವೇಷಣೆ ಮಾಡಿದ್ದಾರೆ. ಪಾಕಿಸ್ತಾನದಿಂದ ಅವರು ಮರಳಿದ ಮೇಲೆ ಸ್ವಪಕ್ಷದವರೇ, ಆರ್‍ಎಸ್‍ಎಸ್‍ನವರೇ ಅಡ್ವಾಣಿ ವಿರುದ್ಧ ನಿಂತಿದ್ದರು. ಮೋದಿ(Narendra Modi) ಪ್ರಧಾನಿಯಾಗಬೇಕು. ಈ ಬಾರಿಯೇ ಪ್ರಧಾನಿಯಾಗಬೇಕು. ಅಡ್ವಾಣಿ ಪ್ರಧಾನಿಯಾಗಲಿ, ಮೋದಿ ಗೃಹಮಂತ್ರಿಯಾಗಲಿ. ಇನ್ನೂ 3 ವರ್ಷ ಗುಜರಾತ್ ಮಾಡಲ್ ಸಿದ್ಧಗೊಳ್ಳಬೇಕು. ನಂತರ ಮೋದಿಯೇ ಪ್ರಧಾನಿಯಾಗಬೇಕು ಎಂದು ಜನರು ಸಹ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದನ್ನೂ ವೀಕ್ಷಿಸಿ: ಕುಮಾರಸ್ವಾಮಿ V/S ಡಿಕೆಶಿ ಮಧ್ಯೆ ನಿಲ್ಲದ ಮಾತಿನ ಸಮರ! ನನ್ನ ಜಮೀನಿನ ಬಂಡೆ ಒಡೆದು ಬದುಕಿದ್ದೇನೆಂದ ಡಿಸಿಎಂ!