ಡಜನ್‌ಗಟ್ಟಲೆ ಮೊಸಳೆ ಮೊಟ್ಟೆಗಳು! ಗ್ರಾಮಸ್ಥರಲ್ಲಿ ಆತಂಕ

ಡಜನ್‌ಗಟ್ಟಲೆ ಮೊಸಳೆ ಮೊಟ್ಟೆಗಳು! ಗ್ರಾಮಸ್ಥರಲ್ಲಿ ಆತಂಕ

Published : Jul 02, 2022, 05:28 PM IST

ಮುಜಾಫರ್‌ನಗರ: ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಒಂದು ಮನೆಯಲ್ಲಿ ಮೊಸಳೆಯ 12 ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಐದು ಮೊಟ್ಟೆಗಳಿಂದ ಮರಿಗಳು ಹೊರ ಬಂದಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮುಜಾಫರ್‌ನಗರ: ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಒಂದು ಮನೆಯಲ್ಲಿ ಮೊಸಳೆಯ 12 ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಐದು ಮೊಟ್ಟೆಗಳಿಂದ ಮರಿಗಳು ಹೊರ ಬಂದಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಜಾಫರ್ ನಗರ ಜಿಲ್ಲೆಯ ಪುರ್ಕಾಜಿ ಪಟ್ಟಣದ ಖಾದರ್ ಪ್ರದೇಶದ ಭದೌಲಾ ಗ್ರಾಮದಲ್ಲಿಈ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಗ್ರಾಮದ ಅರುಣ್ ತ್ಯಾಗಿ ಎಂಬುವವರ ಮನೆಯ ಬಳಿ ಸುಮಾರು ಹನ್ನೆರಡು ಮೊಸಳೆ ಮೊಟ್ಟೆಗಳು ಸಿಕ್ಕಿದ್ದರಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿತ್ತು. ಇವುಗಳನ್ನು ಗ್ರಾಮಸ್ಥರು ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಸುರಕ್ಷಿತವಾಗಿ ಇರಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ, ಈ ಮೊಟ್ಟೆಗಳಿಂದ ಸುಮಾರು 5 ಮೊಸಳೆ ಮರಿಗಳು ಹೊರಬಂದವು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಈ ಮೊಸಳೆಗಳ ಮರಿಗಳನ್ನು ಕರೆದೊಯ್ದಿದ್ದಾರೆ. ಈ ಮೊಸಳೆಗಳು ಪತ್ತೆಯಾದ ಜಾಗವೂ  ನದಿ ಸಮೀಪವಿದ್ದು, ಎರಡು ವರ್ಷಗಳ ಹಿಂದೆಯೂ ಇಲ್ಲಿ ದೈತ್ಯ ಮೊಸಳೆಯೊಂದು ಬಂದಿತ್ತು. ಈ ವೇಳೆ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಎಲ್ಲೋ ದೂರ ಬಿಟ್ಟಿದ್ದರು. 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more