
ಬೆಂಗಳೂರು (ಜೂ.10): ಮೋದಿ 3.0 ಒಡ್ಡೋಲಗಕ್ಕೆ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ನಮೋ ಸಾಧಿಸಿದ್ದೇನು..? 11 ವರ್ಷಗಳ ದೆಹಲಿ ದರ್ಬಾರ್ ನಲ್ಲಿ ಮೋದಿ ಮಹಾ ಹೆಜ್ಜೆ ಸಾಗಿದೆ.
ದಶಕದ ದಂಡಯಾತ್ರೆ ಅಭೂತಪೂರ್ವವಾಗಿ ಸಾಗಿದೆ. ಸಿಂದೂರ ಕ್ರಾಂತಿ ಜೊತೆಗೆ ಮೋದಿ ಮುಂದೆ ಸಾವಿರ ದಿನಗಳ ಸವಾಲು ಇದೆ. ಜೂನ್ 9ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ 3.0 ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಮೋದಿ ಸರ್ಕಾರದ ಈ ಒಂದು ವರ್ಷದ ಸಾಧನೆ ಏನು? 12 ತಿಂಗಳಿನಲ್ಲಿ ಮೋದಿ ಸರ್ಕಾರದ ಕೊಡುಗೆ ಏನು?
ಆಪರೇಷನ್ ಸಿಂದೂರ್‌ನಿಂದ ಹಿಡಿದು ಮೂಲ ಸೌಕರ್ಯದವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷದ ರಿಪೋರ್ಟ್ ಕಾರ್ಡ್ ಏನು ಅನ್ನೋದು ಇಲ್ಲಿದೆ.ನರೇಂದ್ರ ಮೋದಿ ನೇತೃತ್ವದ 3.0 ಅಳ್ವಿಕೆಯ ಒಂದು ವರ್ಷದ ಅವಧಿಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ, ಜಾತಿ ಜನಗಣತಿ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯ್ತಿ ಸೇರಿದಂತೆ ಇನ್ನು ಅನೇಕ ಮಹತ್ತದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.