LK Advani: ಕರಾಚಿ ಜನ್ಮಭೂಮಿ.. ಭಾರತ ಕರ್ಮಭೂಮಿ.. ಕೇಸರಿ ಲೋಹಪುರುಷ..!

LK Advani: ಕರಾಚಿ ಜನ್ಮಭೂಮಿ.. ಭಾರತ ಕರ್ಮಭೂಮಿ.. ಕೇಸರಿ ಲೋಹಪುರುಷ..!

Published : Feb 04, 2024, 04:17 PM IST

ಆರೆಸ್ಸೆಸ್ ಪ್ರಚಾರಕ.. ಜನಸಂಘದ ನಾಯಕ.. ಬಿಜೆಪಿ ರಾಷ್ಟ್ರಾಧ್ಯಕ್ಷ..!
ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿತ್ತು ರಾಮ ರಥಯಾತ್ರೆ..!
"ಮಂದಿರ್ ವಹೀ ಬನಾಯೇಂಗೇ.." ಎಂದು ಘರ್ಜಿಸಿದ್ದರು ಅಡ್ವಾಣಿ..!

ಭಾರತದ ಉಕ್ಕಿನ ಮನುಷ್ಯನಿಗೆ, ಬಿಜೆಪಿಯ(BJP) ಲೋಹಪುರುಷವಿಗೆ, ಬಿಜೆಪಿ ಭೀಷ್ಮಾಚಾರ್ಯನಿಗೆ ಭಾರತ ರತ್ನ(Bharat Ratna). ಕರಾಚಿಯಲ್ಲಿ ಹುಟ್ಟಿ ಭಾರತದ ರಾಜಕಾರಣದಲ್ಲಿ ಪ್ರಜ್ವಲಿಸಿ, ದೇಶದ ರಾಜಕೀಯ ಚರಿತ್ರೆಯ ದಿಕ್ಕನ್ನೇ ಬದಲಿಸಿದ್ದ ಕೇಸರಿ ಕಟ್ಟಾಳುವಿಗೆ ಸಂದಿತು ದೇಶದ ಅತ್ಯುನ್ನತ ಗೌರವ. ಎಲ್.ಕೆ ಅಡ್ವಾಣಿಯವರಿಗೆ ಬಹು ದೊಡ್ಡ ಗುರು ದೀಕ್ಷೆ ಕೊಟ್ಟರು ಶಿಷ್ಯೋತ್ತಮ ನರೇಂದ್ರ ಮೋದಿ. ಲಾಲ್ ಕೃಷ್ಣ ಅಡ್ವಾಣಿ.. ಹುಟ್ಟಿದ್ದು ಪಾಕಿಸ್ತಾನ ಕರಾಚಿಯಲ್ಲಿ. ಜ್ವಾಲೆಯಂತೆ ಪ್ರಜ್ವಲಿಸಿದ್ದು ಭಾರತದ ನೆಲದಲ್ಲಿ. ಬಿಜೆಪಿಗೆ ನೆಲೆಯೇ ಇಲ್ಲದ ನೆಲದಲ್ಲಿ ಕಮಲ ಬಾವುಟ ಹಾರಿಸಿ ಕೇಸರಿ ಕೋಟೆ ಕಟ್ಟಿದ್ದ ರಣವಿಕ್ರಮ ಎಲ್.ಕೆ ಅಡ್ವಾಣಿ(Lal Krishna Advani). ರಾಮಜನ್ಮಭೂಮಿ ಅಯೋಧ್ಯೆಯಲ್ಲಿಂದು ಭವ್ಯ ರಾಮಮಂದಿರ(Ram Mandir) ತಲೆ ಎತ್ತಿ ನಿಂತಿದೆ ಅಂದ್ರೆ ಅದ್ರ ನಿಜವಾದ ರೂವಾರಿ ಎಲ್.ಕೆ ಅಡ್ವಾಣಿ. ಭಾರತದ ರಾಜಕೀಯ ದಿಕ್ಕನ್ನೇ ಬದಲಿಸಿದ ರಾಜಕೀಯ ನೇತಾರನಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 96 ವರ್ಷದ ವಯೋವೃದ್ಧ ಅಡ್ವಾಣಿಯವರ ಜೀವನದಲ್ಲಿದು ಅತ್ಯಂತ ಶ್ರೇಷ್ಠ ಕ್ಷಣ. ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಸುದ್ದಿಯನ್ನು ಪುತ್ರಿ ಪ್ರತಿಭಾ ಅಡ್ವಾಣಿ, ತಂದೆಯವರಿಗೆ ಹೇಳುತ್ತಿದ್ದಂತೆ ಬಿಜೆಪಿ ಭೀಷ್ಮಾಚಾರ್ಯ ಸಂಭ್ರಮ ಪಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ರಥಯಾತ್ರೆ ಸಾರಥಿಯ ಧರ್ಮಜಾಗೃತಿ ಹೋರಾಟ..! ರಾಮನಿಗಾಗಿ ಅಡ್ವಾಣಿ ಎದುರಿಸಿದ ವಿಚಾರಣೆಗಳೆಷ್ಟು..?

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more