Jul 14, 2021, 5:37 PM IST
ಬೆಂಗಳೂರು (ಜು. 14): ಫೇಸ್‌ಬುಕ್ ಒಂದು ಮಾಯಾಜಾಲ ಇದ್ದತೆ. ಇಲ್ಲಿ ಫೇಮಸ್ ಆಗಲು ಏನೇನೋ ಮಾಡ್ತಾ ಇರ್ತಾರೆ. ಇಲ್ಲೊಬ್ಬ ಯುವಕ ಫೇಸ್‌ಬುಕ್‌ನಲ್ಲಿ ಫೇಮಸ್ ಆಗಲು ಜೀಪ್ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ನಕರಾ ಮಾಡುತ್ತಿದ್ದ. ಆಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಪೊಲೀಸರು ಈ ಪುಡಾರಿಗಳಿಗೆ ಬರೋಬ್ಬರಿ 18 ಸಾವಿರ ರೂ ದಂಡ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.