Apr 2, 2024, 12:03 PM IST
ತಮಿಳುನಾಡಿನಲ್ಲಿ ಬಿಜೆಪಿ(BJP) ನಾಯಕರಿಗೆ ಮತ್ತೊಂದು ಬ್ರಹ್ಮಾಸ್ತ್ರ ಸಿಕ್ಕಿದೆ. 1974ರಲ್ಲಿ ಕಾಂಗ್ರೆಸ್(Congress) ಸರ್ಕಾರದ ಯಡವಟ್ಟನ್ನೇ ಚುನಾವಣಾ ಅಸ್ತ್ರವಾಗಿಸಿಕೊಂಡಿದೆ. ಮಾಲ್ಡೀವ್ಸ್‌ಗಿಂತಲೂ ಸುಂದರವಾಗಿರುವ ತಮಿಳುನಾಡಿನ ಕಚ್ಚತೀವು ದ್ವೀಪವನ್ನ(Katchatheevu Island) ಶ್ರೀಲಂಕಾಗೆ ಇಂದಿರಾ ಸರ್ಕಾರ ಬಿಟ್ಟು ಕೊಟ್ಟಿತು ಎಂಬುದು ಬಯಲಾಗಿದೆ. ತಮಿಳುನಾಡು(Tamilnadu) ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ(K. Annamalai) ಹಾಕಿದ ಆರ್‌ಟಿಐ ಅರ್ಜಿಯಲ್ಲಿ ಸತ್ಯ ಹೊರಬಂದಿದ್ದು ಆರೋಪ-ಪ್ರತ್ಯಾರೋಪ ಜೋರಾಗ್ತಿದೆ. ಕೆ. ಅಣ್ಣಾಮಲೈ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸರ್ಕಾರ ಮಾಹಿತಿ ನೀಡಿದ್ದು, ಆರ್‌ಟಿಐ ವರದಿ(RTI) ಬಹಿರಂಗವಾಗ್ತಿದ್ದಂತೆ ತಮಿಳುನಾಡಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗ ಕಾಂಗ್ರೆಸ್, ಡಿಎಂಕೆ(DMK) ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಾರೆ. ಟ್ವಿಟರ್‌ನಲ್ಲಿ ಕಾಂಗ್ರೆಸ್, ಡಿಎಂಕೆ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಎಡವಟ್ಟಿನಿಂದ ಕಚ್ಚತೀವು ದ್ವೀಪ ಕಳೆದುಕೊಂಡಿದ್ದೇವೆ. ತಮಿಳುನಾಡಿಗಾಗಿ ಡಿಎಂಕೆ ಏನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಂ ಮೋದಿ ಟ್ವೀಟ್‌ಗೆ ಕಿಡಿ ಕಾರಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, 10 ವರ್ಷ ಆಡಳಿತದಲ್ಲಿ ಏನು ಮಾಡುತ್ತಿದ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯ ಹೊತ್ತಲ್ಲಿ ಕಚತೀವು ನೆನಪಾಯ್ತಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇದನ್ನೂ ವೀಕ್ಷಿಸಿ: Jagadish Shettar: ಬೆಳಗಾವಿಯಲ್ಲಿ ಮೂಲ VS ವಲಸಿಗ ಸಮರ: ಕಾಂಗ್ರೆಸ್‌ಗೆ ಬಿಜೆಪಿ ನಾಯಕರಿಂದ ಕೌಂಟರ್ ಅಟ್ಯಾಕ್ !