Jul 15, 2024, 9:32 AM IST
ಒಂದಲ್ಲ ಎರಡಲ್ಲ..ಬರೋಬ್ಬರಿ 46 ವರ್ಷಗಳ ನಂತರ ಈ ಬಾಗಿಲು ತೆರೆಯುತ್ತಿರೋದು. ಅಷ್ಟಕ್ಕೂ ಇದು ಅಂತಿಂಥ ಬಾಗಿಲಲ್ಲ, ಇದು ಪುರಿ ಜಗನ್ನಾಥನ (Jagannath Puri) ರತ್ನ ಭಂಡಾರದ ಬಾಗಿಲು. ಈ ರತ್ನ ಭಂಡಾರದಲ್ಲಿ(Rathna Bandara) ಏನೇನು ಇರಬಹುದು. ಅದು ನಮ್ಮೆಲ್ಲರ ಅಂಕೆ ಶಂಕೆಯೂ ಮೀರಿದ್ದು. ವಜ್ರ ವೈಢೂರ್ಯ, ಒಂದು ಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. 250ಕ್ಕೂ ಹೆಚ್ಚು ಬೆಳ್ಳಿ ಈ ಭಂಡಾರದೊಳಗೆ ಇದೆ ಅಂತ ಹೇಳಲಾಗಿದ್ದರೂ, ಅದಕ್ಕಿಂತಲೂ ಹೆಚ್ಚು ಅತ್ಯಮೂಲ್ಯ ವಸ್ತುಗಳಿವೆ ಅಂತ ಕೂಡ ಹೇಳಲಾಗುತ್ತಿದೆ. ಈ ರತ್ನ ಭಂಡಾರದ ಬಾಗಿಲು ಕೊನೆಯ ಬಾರಿ ಅಂದರೆ 46 ವರ್ಷದ ಹಿಂದೆ ತೆರೆಯಲಾಗಿತ್ತು. ಅದರ ನಂತರ ಇಂದು ತೆರೆಯಲಾಗಿದೆ. ಪಿಎಂ ಮೋದಿ (Narendra Modi)ಒಡಿಶಾದಲ್ಲಿ ಪ್ರಚಾರಕ್ಕೆಂದು ಹೋದಾಗ ಹೇಳಿದ್ದ ಮಾತಿದು. ಬಿಜೆಪಿ(BJP) ಅಧಿಕಾರಕ್ಕೆ ಬಂದರೆ, ಈ ರತ್ನ ಭಂಡಾರದ ಬಾಗಿಲು ತೆರೆದೇ ತೆರೆಯುತ್ತೆ. ಜೊತೆಗೆ ಈ ರತ್ನ ಭಂಡಾರದ ಹಿಂದಿರೋ ರಹಸ್ಯ ಕೂಡ ಬಯಲಾಗೇ ಆಗುತ್ತೆ ಅಂತ ಹೇಳಿದ್ದರು. ಆ ದಿನ ಕೊಟ್ಟ ಮಾತನ್ನ ಪ್ರಧಾನಿ ಮೋದಿ ಇಂದು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡು ಇನ್ನೂ ಒಂದುವರೆ ತಿಂಗಳಾಗಿದೆ. ಆಗಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು. ಈ ರತ್ನ ಭಂಡಾರದ ಬಾಗಿಲ ಹಿಂದಿರೋ ರಹ್ಯವನ್ನ ಬಯಲು ಮಾಡುವುದಕ್ಕೆ ತೊಡೆತಟ್ಟಿ ನಿಂತಿದ್ದಾರೆ.
ಇದನ್ನೂ ವೀಕ್ಷಿಸಿ: Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!