
ಅಮೆರಿಕದ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದ ಭಾರತ, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸಜ್ಜಾಗಿದೆ. ಪಾಕಿಸ್ತಾನ ಯುದ್ಧವನ್ನು ತಪ್ಪಿಸಲು ಮನವಿ ಮಾಡಿದೆ. ಭಾರತೀಯ ಯುದ್ಧ ಟ್ಯಾಂಕರ್‌ಗಳು ಗಡಿಯತ್ತ ಸಾಗುತ್ತಿವೆ ಮತ್ತು ನೌಕಾಪಡೆಗಳು ಅರಬ್ಬೀ ಸಮುದ್ರದಲ್ಲಿ ಮುಖಾಮುಖಿಯಾಗಿವೆ.
ಬೆಂಗಳೂರು (ಮೇ.1): ಅಮೆರಿಕದ ಮಧ್ಯಸ್ಥಿಕೆಗೆ ಮೋದಿ ಸರ್ಕಾರ ಡೋಂಟ್‌ಕೇರ್ ಎಂದಿದೆ. ಉಗ್ರರನ್ನ ಶಿಕ್ಷಿಸದೇ ಬಿಡಲ್ಲ ಎಂದು ಭಾರತದ ಶಪಥ ಮಾಡಿದೆ. ಯುದ್ಧ ಆಗದಂತೆ ತಡೆಯಿರಿ ಎಂದು ಪಾಕಿಸ್ತಾನ ಮಂಡಿಯೂರಿದೆ.
ಇನ್ನೊಂದೆಡೆ, ರಷ್ಯಾ ಸೇನೆಯ ವಿಡಿಯೋ ಕದ್ದು ಪಾಕಿಸ್ತಾನ ಪೋಸ್ಟ್ ಮಾಡಿದೆ. ಎಸ್-300 ಕ್ಷಿಪಣಿ ವ್ಯವಸ್ಥೆಯ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ರಷ್ಯಾ ಸೇನೆ ಹಾಕಿದ್ದ ವಿಡಿಯೋವನ್ನೇ ಡೌನ್‌ಲೋಡ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಭಾರತದ ಯುದ್ಧ ಟ್ಯಾಂಕರ್‌ಗಳು ಗಡಿಯತ್ತ ನುಗ್ಗುತ್ತಿದ್ದು, ಅರಬ್ಬೀ ಸಮುದ್ರದಲ್ಲಿ ನೌಕಾಪಡೆಗಳು ಮುಖಾಮುಖಿಯಾಗಿವೆ. ಹುಡುಕಿ ಹುಡಿಕಿ ಹೊಡೆಯುತ್ತೇವೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.