
ಭಾರತ-ಪಾಕಿಸ್ತಾನ ನಡುವೆ ಯುದ್ಧಭೀತಿ ಹೆಚ್ಚುತ್ತಿರುವಂತೆಯೇ, ಲೈನ್ ಆಫ್ ಕಂಟ್ರೋಲ್‌ನಲ್ಲಿ 8000 'ಮೋದಿ ಬಂಕರ್'ಗಳನ್ನು ನಿರ್ಮಿಸಲಾಗಿದೆ. ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗಿದೆ.
ಬೆಂಗಳೂರು (ಮೇ.2): ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧಭೀತಿ ಶುರುವಾಗಿದೆ. ಭಾರತ ಈಗಾಗಲೇ ತನ್ನ ಸಿದ್ಧತೆಗಳನ್ನು ಆರಂಭಿಸಿದೆ. ಇದರ ನಡುವೆ ಮೋದಿ ಕವಚ ಕೂಡ ಸಿದ್ಧವಾಗಿದೆ.
ಲೈನ್ ಆಫ್ ಕಂಟ್ರೋಲ್‌ನಲ್ಲೇ ಬರೋಬ್ಬರಿ 8 ಸಾವಿರ 'ಮೋದಿ ಬಂಕರ್' ಸಿದ್ಧವಾಗಿದೆ. ಭೂಮಿಯೊಳಗೆ 8000 ಬಂಕರ್‌ಗಳ ಏಳು ಸುತ್ತಿನ ಕೋಟೆ ಸಿದ್ಧ ಮಾಡಲಾಗಿದೆ. ಈ ಬಾರಿ ಭಸ್ಮಾಸುರ ಸಂಹಾರಕ್ಕೆ ಮೋದಿ ಮಹಾ ಶಪಥ ಮಾಡಿದ್ದಾರೆ. ಇಸ್ರೇಲ್ ಮಾದರಿಯಲ್ಲಿ ಭೂಗತ ಬಂಕರ್ ನಿರ್ಮಾಣವಾಗಿದೆ.
ಭಾರತ-ಪಾಕ್ ಯುದ್ಧಕ್ಕೆ ಅಡ್ಡವಾಗಿ ನಿಂತಿದ್ಯಾ ಅಮೆರಿಕಾ?
ಪಹಲ್ಗಾಮ್ ನರಮೇಧಕ್ಕೆ ನೆತ್ತರ ಉತ್ತರ ಕೊಡಲು ಭಾರತ ಸಿದ್ಧವಾಗಿದೆ. ಲೈನ್ ಆಫ್ ಕಂಟ್ರೋಲ್’ನಲ್ಲಿ ಕಾಶ್ಮೀರಿಗಳ ಅದೊಂದು ನಿಗೂಢ ಹೆಜ್ಜೆಯಿಂದಾಗಿ ವಾರ್ ಸೈರನ್ ಮೊಳಗಿದೆ.