ಗಡಿ ಸಂಘರ್ಷ: 58 ಭಾರತೀಯ ಸೈನಿಕರಿಗೆ ಗಾಯ

Jun 19, 2020, 10:25 AM IST

ಲಡಾಖ್(ಜೂ.19): ಗಲ್ವಾನ್ ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷ ಯುದ್ಧದ ಭೀತಿಯನ್ನೇ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ತಂಟೆಕೋರ ಚೀನಾಗೆ ಬುದ್ದಿ ಕಲಿಸಲು ಭಾರತ ಸರ್ಕಾರ ಮುಂದಾಗಿದ್ದು 12 ಸುಖೋಯ್, 21 ಮಿಗ್ ವಿಮಾನ ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ.

ಇನ್ನು ಚೀನಾ ಗಡಿ ಸಂಘರ್ಷದಲ್ಲಿ 58 ಭಾರತೀಯ ಸೈನಿಕರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಎಲ್ಲಾ ಯೋಧರ ಆರೋಗ್ಯ ಸುಧಾರಣೆಯಾಗಿದೆ. ಯಾರಿಗೂ ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಸೇನಾ ಮೂಲಗಳು ಖಚಿತ ಪಡಿಸಿವೆ.

ಒತ್ತೆಯಿಟ್ಟಿದ್ದ 10 ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದ ಚೀನಾ

ಗಲ್ವಾನ್ ಗಡಿ ಸಂಘರ್ಷದಲ್ಲಿ ಭಾರತದ 76 ಮಂದಿ ಗಾಯಗೊಂಡಿದ್ದು, ಈ ಪೈಕಿ 58 ಮಂದಿ ಇನ್ನೊಂದು ವಾರದಲ್ಲಿ ಹಾಗೆಯೇ 18 ಮಂದಿ ಇನ್ನು 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.