IAF Chopper Crash: ನೀಲಗಿರಿ ಪರ್ವತ ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ? ತಜ್ಞರು ಹೇಳೋದೇನು?

IAF Chopper Crash: ನೀಲಗಿರಿ ಪರ್ವತ ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ? ತಜ್ಞರು ಹೇಳೋದೇನು?

Published : Dec 08, 2021, 09:41 PM ISTUpdated : Dec 08, 2021, 10:07 PM IST

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಪಶ್ಮಿಮ ಘಟ್ಟ ಆರಂಭವಾಗುವ ಪ್ರದೇಶದಲ್ಲಿ ಸದಾ ದಟ್ಟ ಮಂಜು 
*ತಮಿಳುನಾಡು ದುರಂತ ನಡೆದ ವಾಯುಮಾರ್ಗದ ಬಗ್ಗೆ ತಜ್ಞರ ವಿಶ್ಲೇಷಣೆ!

ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಈ ಅಪಘಾತದಲ್ಲಿ  ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ.

IAF Chopper Crash: ಬದುಕುಳಿದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

ಈ ಘಟನೆಯಿಂದ ಇಡೀ ದೇಶವೇ ದಿಗ್ಭ್ರಾಂತಗೊಂಡಿದೆ. ಈ ಬೆನ್ನಲ್ಲೇ ಉನ್ನತ ಅಧಿಕಾರಿಗಳು ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಪಾಲಿಸಬೇಕಾದ ಪ್ರೋಟೋಕಾಲ್‌ (Protocol) ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ನೀಲಗಿರಿ ಪರ್ವತ ( Nilagiri Hills) ಈ ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ? ಎಂಬ ಬಗ್ಗೆ ತಜ್ಞರು (Experts) ವಿಶ್ಲೇಷಿಸಿದ್ದು ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಪಶ್ಮಿಮ ಘಟ್ಟ ಆರಂಭವಾಗುವ ಪ್ರದೇಶದಲ್ಲಿ ಸದಾ ದಟ್ಟ ಮಂಜು ಆವರಿಸಿರುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪ್ರಯಾಣ ಕಷ್ಟಕರ ಎಂದು ತಜ್ಞರು ಹೇಳಿದ್ದಾರೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more