RSS ಸಂಸ್ಥಾಪಕ ಡಾ.ಹೆಡಗೇವಾರ್: ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಬಿಡುಗಡೆ

RSS ಸಂಸ್ಥಾಪಕ ಡಾ.ಹೆಡಗೇವಾರ್: ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಬಿಡುಗಡೆ

Published : Mar 02, 2024, 11:15 AM ISTUpdated : Mar 02, 2024, 11:16 AM IST

ಡಾ.ಹೆಡಗೇವಾರ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ
RSS ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್
ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಲೋಕಾರ್ಪಣೆ

ದೆಹಲಿಯಲ್ಲಿ RSS ಸಂಸ್ಥಾಪಕ ಡಾ.ಹೆಡಗೇವಾರ್ ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ(Man of the Millennium book) ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ  ವ್ಯಕ್ತಿ ನಿರ್ಮಾಣ, ಸಮಾಜ ನಿರ್ಮಾಣ, ರಾಷ್ಟ್ರ ನಿರ್ಮಾಣ ಹಾಗು ಚರಿತ್ರೆಯ ನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಂದಿನ ಸಾಲಿನಲ್ಲಿರುತ್ತೆ ಎಂದು ಏಷ್ಯಾನೆಟ್ ನೆಟ್‌ವರ್ಕ್ ಚೇರ್ಮನ್ ರಾಜೇಶ್ ಕಾಲ್ರಾ ಅಭಿಪ್ರಾಯಪಟ್ರು. ನವದೆಹಲಿಯ(Dlehi) ಸಿಎಂ ಬಾಲಯೋಗಿ ಆಡಿಟೋರಿಯಂನಲ್ಲಿ RSS ಸಂಸ್ಥಾಪಕ ಡಾ.ಹೆಡಗೇವಾರ್(DR. Keshav Baliram hedgewar) ಮ್ಯಾನ್ ಆಫ್ ದಿ ಮಿಲೇನಿಯಾ ಡಾ.ಹೆಡಗೇವಾರ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿತು.ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಸೀರ್ ಡಾ.ಹೆಡಗೇವಾರ್ ಅವರ ಜೀವನಚರಿತ್ರೆಯನ್ನು ಬಿಡುಗಡೆ ಮಾಡಿದ್ರು. ಇದೇ ವೇಳೆ ಮಾತನಾಡಿದ ಏಷ್ಯಾನೆಟ್ ನೆಟ್ವರ್ಕ್ ಚೇರ್ಮನ್ ರಾಜೇಶ್ ಕಾಲ್ರಾ  RSS ಸದಾ ರಾಷ್ಟ್ರದ ಮುಖ್ಯ ಅನ್ನುತ್ತೆ. ವ್ಯಕ್ತಿ, ಚರಿತ್ರೆ ಹಾಗೂ ಸಮಾಜ ನಿರ್ಮಾಣದಲ್ಲಿ ಸದಾ ಮುಂದಿರುತ್ತೆ ಅಂದ್ರು. ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿದ್ರು. ಡಾ. ಹೆಡಗೇವಾರ್ ಅವರ ದೇಶಭಕ್ತಿ ಎಂಥದ್ದು ಎಂದ್ರೆ ಈ ರಾಷ್ಟ್ರದಲ್ಲಿ ನಾವು ಹುಟ್ಟಿದ್ದೇವೆ ಇದು ನಮ್ಮ ಕರ್ತವ್ಯ ಎನ್ನುತ್ತಿದ್ದರು. ಅವರೊಬ್ಬ ರಾಜಿಯಾಗದ, ಕ್ರಿಯಾಶೀಲ ದೇಶಭಕ್ತ. ಇನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಎರಡು ಬಾರಿ ಜೈಲಿಗೆ ಹೋಗಿದ್ರು ಅಂದ್ರು. ರಾಜ್ಯಪಾಲ ನ್ಯಾ.ಅಬ್ದುಲ್ ನಸೀರ್ ಸಹ ಮಾತನಾಡಿ, ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತುಂಬಾ ಖುಷಿಯಾಗುತ್ತಿದೆ. ಡಾ.ಹೆಡಗೇವಾರ್ ಒಬ್ಬ ಮಹಾನ್ ರಾಷ್ಟ್ರಭಕ್ತ. ತಾಯಿನಾಡಿಗಾಗಿ ಅವರು ಬಾಲ್ಯದಿಂದಲೇ ಧ್ವನಿ ಎತ್ತಿದ್ದವರು ಎಂದು ಹಾಡಿ ಹೊಗಳಿದ್ರು.

ಇದನ್ನೂ ವೀಕ್ಷಿಸಿ:  ಬಸವನಗುಡಿ ಸಂಭ್ರಮ: ಫುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್‌ಗೆ ಭರ್ಜರಿ ರೆಸ್ಪಾನ್ಸ್

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more