Mar 18, 2024, 11:43 AM IST
ಚುನಾವಣಾ ಬಾಂಡ್ ದೇಣಿಗೆ ರಹಸ್ಯ ಬಹಿರಂಗವಾಗಿದ್ದು, ಸುಪ್ರೀಂ ಕೋರ್ಟ್(Supreme court) ಸೂಚನೆ ಬೆನ್ನಲ್ಲೇ ದೇಣಿಗೆ ರಹಸ್ಯ ಬಯಲಾಗಿದೆ. ಡೆಡ್‌ಲೈನ್‌ಗೂ ಮುನ್ನವೇ ಎಲೆಕ್ಷನ್ ಬಾಂಡ್ (Election bond) ರಹಸ್ಯ ತಿಳಿದಿದೆ. ಎಸ್‌ಬಿಐ ನೀಡಿದ ಬಾಂಡ್ ವಿವರ. ಚುನಾವಣಾ ಆಯೋಗ(Election Commission) ಪ್ರಕಟಗೊಳಿಸಿದೆ. 763 ಪುಟಗಳ ಚುನಾವಣಾ ಬಾಂಡ್ ವಿವರ ಪ್ರಕಟಗೊಂಡಿದ್ದು, 4 ವರ್ಷಗಳು, 16 ಸಾವಿರ ಕೋಟಿ ಚುನಾವಣಾ ಬಾಂಡ್ ಖರೀದಿ ಮಾಡಲಾಗಿದೆ. ಬಿಜೆಪಿಗೆ(BJP) ಅತೀ ಹೆಚ್ಚು ಅಂದರೆ, 6,060 ಕೋಟಿ ದೇಣಿಗೆ ಪಡೆದ್ರೆ, ಟಿಎಂಸಿ 1,609 ಕೋಟಿ ದೇಣಿಗೆ ಪಡೆದು 2ನೇ ಸ್ಥಾನ ಪಡೆದಿದೆ. 1,421 ಕೋಟಿ ದೇಣಿಗೆ ಪಡೆದು ಕಾಂಗ್ರೆಸ್ 3ನೇ ಸ್ಥಾನ ಪಡೆದುಕೊಂಡಿದೆ. ಬಿಆರ್‌ಎಸ್ 1,214 ಕೋಟಿ, ಜೆಡಿಎಸ್ 43 ಕೋಟಿ ರೂ.ಖರೀದಿ ಮಾಡಿದೆ. ಬಾಂಡ್ ಖರೀದಿ ಮಾಡಿದ 16 ಕಂಪನಿ ಮೇಲೆ ಇಡಿ, ಐಟಿ ದಾಳಿ ನಡೆಸಲಾಗಿದೆ. ಬಾಂಡ್‌ಗಳ ಖರೀದಿಸದ ರಿಲಾಯನ್ಸ್, ಟಾಟಾ,ಅದಾನಿ ಗ್ರೂಪ್.
ಇದನ್ನೂ ವೀಕ್ಷಿಸಿ: ಜಗದೀಶ್ ಶೆಟ್ಟರ್ ಸ್ಪರ್ಧೆಗೆ ‘ಲೋಕಲ್’ ಸಿಟ್ಟು..ಬೆಳಗಾವಿಯಲ್ಲಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ!