News Hour: ಸಂಸತ್ ಕಲಾಪದಲ್ಲೂ ಪ್ರತ್ಯೇಕ ರಾಷ್ಟ್ರದ ಕಿಚ್ಚು: ಡಿ.ಕೆ. ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು !

News Hour: ಸಂಸತ್ ಕಲಾಪದಲ್ಲೂ ಪ್ರತ್ಯೇಕ ರಾಷ್ಟ್ರದ ಕಿಚ್ಚು: ಡಿ.ಕೆ. ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು !

Published : Feb 03, 2024, 09:18 AM IST

ಡಿಕೆ ಸುರೇಶ್ ಹೇಳಿಕೆಗೆ ಖಂಡನೆ, ಮುಗಿಬಿದ್ದ BJP ನಾಯಕರು
ದೇಶಕ್ಕೆ ಕ್ಷಮೆಯಾಚಿಸಿ.. ಡಿಕೆ ಸುರೇಶ್ ವಿರುದ್ಧ ಕ್ರಮಕ್ಕೆ ಆಗ್ರಹ
ಸಂಸದ ಡಿಕೆ ಸುರೇಶ್ ಮಾತು ಸಹಿಸಲ್ಲ ಎಂದು ಖರ್ಗೆ ಸ್ಪಷ್ಟನೆ!

ಅನುದಾನ ಅನ್ಯಾಯ ಆಗ್ತಿದೆ ಎಂದು ಟೀಕೆ ಮಾಡುತ್ತಾ ಕಾಂಗ್ರೆಸ್(Congress) ಸಂಸದ ಡಿ.ಕೆ. ಸುರೇಶ್(DK Suresh) ದೇಶವನ್ನೇ ಒಡೆಯುವ ಮಾತಾಡಿದ್ದಾರೆ. ಕಾಂಗ್ರೆಸ್ ಸಂಸದನ ಈ ಹೇಳಿಕೆ ದೇಶಾದ್ಯಂತ ಕಿಚ್ಚೆಬ್ಬಿಸಿದೆ. ಸದನದಲ್ಲೂ ಬಿಜೆಪಿ(BJP) ಸದಸ್ಯರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಈ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಮಾತಾಡಿದ ಖರ್ಗೆ(Mallikarjun Kharge), ದೇಶ ಒಡೆಯುವ ಮಾತನ್ನೂ ಸಹಿಸಲ್ಲ. ತಪ್ಪಿದ್ದರೆ ಹಕ್ಕುಚ್ಯುತಿಗೆ ಕೊಡಿ ಎಂದು ಕೂಡ ಮನವಿ ಮಾಡಿದ್ರು. ಅತ್ತ ಲೋಕಸಭೆಯಲ್ಲೂ(Loksabha) ಜೋಶಿ, ಕಾಂಗ್ರೆಸ್ ದೇಶದ ಕ್ಷಮೆಯಾಚಿಸಲಿ ಎಂದು ಆಗ್ರಹ ಮಾಡಿದ್ರು. ಲೋಕಸಭೆ ಹೊತ್ತಲ್ಲಿ ಬಿಜೆಪಿಗೆ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಿಷನ್ ಅಸ್ತ್ರ ಹಿಡಿದೇ ಬಿಜೆಪಿ ವಿರುದ್ಧ ದಾಳಿ ನಡೆಸಿ, ಅಧಿಕಾರ ಹಿಡಿದಿದೆ. ಈಗ ಇದೇ ಅಸ್ತ್ರವೇ ಕಾಂಗ್ರೆಸ್‌ಗೆ ಯೂಟರ್ನ್ ಆಗಿದೆ. ಹಾಸನದಲ್ಲಿ ಮಾತಾಡಿದ ಹಿರಿಯ ಕಾಂಗ್ರೆಸ್ ನಾಯಕ ಬಿ ಶಿವರಾಂ(B Shivaram), ನಮ್ಮ ಸರ್ಕಾರದಲ್ಲೂ ಶೇ.40ಕ್ಕಿಂತಲೂ ಹೆಚ್ಚು ಕಮಿಷನ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆಯೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.

ಇದನ್ನೂ ವೀಕ್ಷಿಸಿ: Ayodhya Ram Mandir: ತಿರುಪತಿಯನ್ನೂ ಮೀರಿಸುತ್ತಾ ಅಯೋಧ್ಯೆ..? ದಿನಕ್ಕೆ ತಿರುಪತಿ ದೇಣಿಗೆ ಎಷ್ಟು..? ಅಯೋಧ್ಯೆಗೆ ಎಷ್ಟು..?

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more