ಸೋಷಿಯಲ್ ಮೀಡಿಯಾದಲ್ಲಿ ಡೀಪ್‌ಫೇಕ್ ಸಂಚಲನ: ಪ್ರಧಾನಿ ಮೋದಿಯನ್ನೂ ಬಿಟ್ಟಿಲ್ಲ ಈ ವಿಡಿಯೋ !

ಸೋಷಿಯಲ್ ಮೀಡಿಯಾದಲ್ಲಿ ಡೀಪ್‌ಫೇಕ್ ಸಂಚಲನ: ಪ್ರಧಾನಿ ಮೋದಿಯನ್ನೂ ಬಿಟ್ಟಿಲ್ಲ ಈ ವಿಡಿಯೋ !

Published : Nov 18, 2023, 10:52 AM IST

ಡೀಪ್‌ಫೇಕ್ ವಿಡಿಯೋಗಳು ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಸೋಶಿಯಲ್ ಮಿಡಿಯಾದಲ್ಲಿ ಅಂತೂ ಈ ನಕಲಿ ವಿಡಿಯೋ ಸದ್ದು ಮಾಡ್ತಿದೆ. ಈ ವಿಡಿಯೋ ಈಗ ಮೋದಿಯನ್ನೇ ಬಿಟ್ಟಿಲ್ಲ. ಪ್ರಧಾನಿ ಡ್ಯಾನ್ಸ್ ಮಾಡೋ ವಿಡಿಯೋ ವೈರಲ್ ಆಗಿದ್ದು, ಮೋದಿಯೇ ಆತಂಕ ವ್ಯಕ್ತಪಡಿಸಿದ್ದಾರೆ.
 

ಡೀಪ್‌ಫೇಕ್ ವಿಡಿಯೋ ಈಗ ದೇಶದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಫೇಮಸ್ ವ್ಯಕ್ತಿ ಮುಖಕ್ಕೆ ನಕಲಿ ಫೋಟೋ(Photo) ಹಾಕಿ ವಿಡಿಯೋ ಹರಿ ಬಿಟ್ಟು ಪೇಚಿಗೆ ಸಿಲುಕಿಸುತ್ತಿದ್ದಾರೆ. ಇಂಥದ್ದೊಂದು ಪೇಚಿಗೆ ಸಿಲುಕಿದ್ದರು ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಡೀಪ್ ಫೇಕ್(Deepfake) ವಿಡಿಯೋ ದೇಶದಲ್ಲಿ ಹಲ್ಚಲ್ ಎಬ್ಬಿಸಿತ್ತು. ಇದರ ಇದಕ್ಕೆ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು. ಇದೀಗ ಡೀಪ್ ಫೇಕ್ ವೀರರು ಪ್ರಧಾನಿ ಮೋದಿ(Narendra Modi) ವಿಡಿಯೋವನ್ನೂ ವೈರಲ್ ಮಾಡಿದ್ದಾರೆ. ಗುಜರಾತ್‌ನ ಗರ್ಭಾ ನೃತ್ಯದಲ್ಲಿ  ಪ್ರಧಾನಿ ಮೋದಿ ಡ್ಯಾನ್ಸ್ ಮಾಡಿದ ರೀತಿಯಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ. ಡ್ಯಾನ್(Dance)ಸ್ ಮಾಡುತ್ತಿರುವ ಯಾರದ್ದೋ ಬಾಡಿಗೆ ಪ್ರಧಾನಿ ಮೋದಿ ಮುಖ ಅಳವಡಿಸಿದ್ದಾರೆ, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಮೋದಿಯೇ ನೃತ್ಯ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಯಾವಾಗ ತಮ್ಮದೇ ಡೀಪ್ ಫೇಕ್ ವಿಡಿಯೋ ವೈರಲ್ ಆಯ್ತೋ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.. ನಾನು ಶಾಲಾ ದಿನಗಳಲ್ಲೂ ಗರ್ಭಾನೃತ್ಯ ಮಾಡಿಲ್ಲ.ಆದರೂ ನಾನು ಡ್ಯಾನ್ಸ್ ಮಾಡೋ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ ಅಂದ್ರು. ತಿರುಚಿದ ವಿಡಿಯೋಗಳು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿವೆ. ಭಾರತದಲ್ಲಿ ಇಂಥಾ ನಕಲಿ ವಿಡಿಯೋಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ ಎಂದರು.

ಇದನ್ನೂ ವೀಕ್ಷಿಸಿ:  ವಿಶ್ವ ಪ್ರಸಿದ್ಧ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆ: ಗುಂಡಿ ಬಿದ್ದ ರಸ್ತೆ, ಧೂಳಿನಿಂದ ತುಂಬಿದ ಮಾರುಕಟ್ಟೆ!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more