Darul Uloom Deoband: ಸದ್ದಿಲ್ಲದೇ ಶುರುವಾಗಿದ್ಯಾ ಘಜ್ವಾ-ಇ-ಹಿಂದ್-ಸಿದ್ಧತೆ ? ಫತ್ವಾ ಹೊರಡಿಸಿಲ್ಲ ಎನ್ನುತ್ತಿದೆ ದಿಯೋಬಂದ್..!

Feb 24, 2024, 5:04 PM IST

ರಾಷ್ಟ್ರರಾಜಧಾನಿ ನವದೆಹಲಿಯಿಂದ ಕೇವಲ 100 ಕಿಲೋಮೀಟರ್‌ ದೂರದಲ್ಲಿರೋದೇ ದಾರುಲ್‌ ಉಲುಮ್‌ ದಿಯೋಬಂದ್‌(Darul Uloom Deoband). ಅದೊಂದು ಮದರಾಸಾಗಳನ್ನ ನಡೆಸುವ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ. ತನ್ನ ವೆಬ್‌ಸೈಟ್‌ನಲ್ಲಿ ಘಜ್ವಾ-ಎ-ಹಿಂದ್(Ghazwa-e-Hind) ಅಥವಾ ಭಾರತವನ್ನು ಆಕ್ರಮಿಸಿಕೊಂಡು ಭಾರತವನ್ನ(Indians) ಇಸ್ಲಾಮಿಕರಣ ಮಾಡುವ ಫತ್ವಾ(Fatwa) ಹೊರಡಿಸಿದೆ ಅನ್ನೋ ಆರೋಪ ಕೇಳಿ ಬಂದಿದ್ದು, ಈಗ ಆ ದಾರುಲ್ ಉಲುಮ್ ದಿಯೋ ಬಂದ್ಮೇಲೆ ಕಾನೂನು ಸಮರಕ್ಕೆ ಸಿದ್ಧತೆ ಮಾಡ್ಲಾಗ್ತಾ ಇದೆ. ಭಾರತದ ಆಕ್ರಮಣಕ್ಕಾಗಿ ತ್ಯಾಗ ಮಾಡುವವರನ್ನು ಮಹಾನ್ ಹುತಾತ್ಮರೆಂದು ಪರಿಗಣಿಸಲಾಗುತ್ತದೆ ಎಂದು ಈ ಫತ್ವಾದಲ್ಲಿ ತಿಳಿಸಲಾಗಿದೆ ಅನ್ನೋದೇ  ಘಜ್ವಾ ಇ ಹಿಂದ್ ಮತ್ತೆ ಸದ್ದು ಮಾಡೋಕೆ ಕಾರಣ. ದಾರುಲ್ ಉಲುಮ್  ದಿಯೋಬಂದ್‌ ಇರೋದು ಉತ್ತರ ಪ್ರದೇಶದಲ್ಲಿ(Uttara pradesh). ವಿವಾದಾತ್ಮಕ ಫತ್ವಾ ಹೊರಡಿಸೋ ಮೂಲಕ ಮಕ್ಕಳಲ್ಲಿ ಧರ್ಮಾಂಧತೆಯನ್ನ ತುಂಬಲಾಗ್ತಾ ಇದೆ ಹಾಗೂ ಭಾರತವನ್ನ ಶತ್ರು ದೇಶದಂತೆ ನೋಡುವ ಪರಿಪಾಠ ಕಲಿಸಲಾಗ್ತ ಇದೆ ಅನ್ನೋದು ಆರೋಪ. ದಾರುಲ್ ಉಲೂಮ್ ದಿಯೋಬಂದ್, ಭಾರತದಲ್ಲಿನ ಅತಿದೊಡ್ಡ ಇಸ್ಲಾಮಿಕ್ ಸೆಮಿನರಿಯಾಗಿದ್ದು, ಲಕ್ಷಾಂತರ ಮಕ್ಕಳು ಕಲಿಯುವ ದೇಶದಲ್ಲಿ ಹಲವಾರು ಮದರಸಾಗಳನ್ನು ನಡೆಸುತ್ತಿದೆ. ಇಂತಹ ದೇಶದ್ರೋಹಿ ವಿಚಾರಗಳಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಎನ್‌ಸಿಪಿಸಿಆರ್‌ ಅಂದ್ರೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಇದನ್ನೂ ವೀಕ್ಷಿಸಿ: ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ: ಅನಂತಕುಮಾರ್ ಹೆಗಡೆ