May 28, 2024, 8:50 AM IST
ಭಾರೀ ಮಳೆ.. ಭಾರೀ ಬಿರುಗಾಳಿ.. ಸೈಲೆಂಟ್ ಆಗಿ ಎಂಟ್ರಿ ಆದ ರೆಮಲ್(Cyclone Remal) ರಕ್ಕಸ. ಇದು 2024ರ ಮೊದಲ ಚಂಡಮಾರುತವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ(Bay of Bengal) ಉದ್ಭವವಾಗಿದೆ. ಅಲ್ಲದೇ ಕರ್ನಾಟಕದಲ್ಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ರೆಮಲ್ ರಾಕ್ಷಸ ಪಕ್ಕದ ಬಾಂಗ್ಲಾ(Bangladesh) ದೇಶದಲ್ಲಿ ಮಾತ್ರ ಅಲ್ಲ, ಭಾರತದಲ್ಲೂ(West Bengal) ದಾಂಗುಡಿ ಇಡುವುದಕ್ಕೆ ಶುರು ಮಾಡಿದ್ದಾನೆ. ಇದರ ಪರಿಣಾಮ ಎಲ್ಲೆಲ್ಲೂ ಜಲವ್ಯೂಹ ಸೃಷ್ಟಿಯಾಗಿದೆ. ಇನ್ನೂ ಈ ವರ್ಷ ಆರಂಭದಿಂದಲೂ ಅಫ್ಘಾನಿಸ್ತಾನಕ್ಕೆ ಜಲಕಂಟಕ ಎಡಬಿಡದೇ ಕಾಡ್ತಿದೆ. ರೆಮಲ್ ಸೈಕ್ಲೋನ್ ಈಗಷ್ಟೇ ಉದ್ಭವ ಆಗಿರುವ ರಾಕ್ಷಸ. ಆದರೆ ಅಫ್ಘಾನಿಸ್ತಾನ್ನಲ್ಲಿ ಕಳೆದ ಕೆಲ ತಿಂಗಳಿನಿಂದ ನಾನ್‌ಸ್ಟಾಪ್ ಆಗಿ, ಪ್ರವಾಹಸುರ ಅಬ್ಬರಿಸುತ್ತಲೇ ಇದ್ದಾನೆ. ಇದರ ಪರಿಣಾಮ ಅಫ್ಘಾನ್ ಜನರ ಜೀವನ, ಅದೇ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಿದೆ. ಈ ಒಂದೊಮದು ದೃಶ್ಯಗಳನ್ನ ನೋಡಿ, ಮಳೆಗಾಲ ಬಂದರೆ ಎದರಾಗುವ ಸಮಸ್ಯೆಗಳನ್ನ ನೋಡಿ ಇಂಥಾ ದಿನಗಳೇ ಬರುವುದು ಬೇಡ ಅಂತಿದ್ದಾರೆ. ಸೈಕ್ಲೋನ್ ಬರ್ತಿದೆ ಅಂದ್ರೆ ಅದರ ಎಫೆಕ್ಟ್ ರಣಭೀಕರ ಆಗಿರುತ್ತೆ ಅನ್ನೊ ಸತ್ಯ ಎಲ್ಲರಿಗೂ ಗೊತ್ತು. ಈಗಾಗಲೇ ಬಾಂಗ್ಲಾದಲ್ಲಿ ಸಾವಿನ ಆಟ ಆಡ್ತಿರೋ ರೆಮಲ್ ಕರ್ನಾಟಕಕ್ಕೂ ಎಂಟ್ರಿ ಆಗುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರು ಇಂದು ಆಪ್ತರಿಗೆ ವ್ಯಯ ಮಾಡಲಿದ್ದು, ಮನಸ್ತಾಪಗಳು ಉಂಟಾಗಲಿವೆ..