ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

Nov 30, 2024, 11:25 AM IST

ಬೆಂಗಳೂರು(ನ.30):  ತಮಿಳುನಾಡಿಗೆ ಡೆಡ್ಲಿ ಫೆಂಗಲ್ ಚಂಡಮಾರುತ ಎಂಟ್ರಿ..! ಶ್ರೀಲಂಕಾದಲ್ಲಿ ಸಿಕ್ಕಿತು ಭೀಕರತೆಯ ಸುಳಿವು..! ಮಹಾಮಳೆಗೆ 12 ಬಲಿ. ಕಣ್ಣ ಮುಂದೆಯೇ ಕುಸಿದು ಬಿದ್ದ ಕಟ್ಟಡ..! ಕಾದಿದ್ಯಾ ಮತ್ತೊಂದು ದುರಂತ..? ರಾಜ್ಯಕ್ಕೂ ಇದ್ಯಾ ಆತಂಕ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಬರ್ತಿದ್ದಾನೆ ಡೆಡ್ಲಿ ‘ಫೆಂಗಲ್’

ಬಂಗಾಳಕೊಲ್ಲಿಯಲ್ಲಿನ ಹವಾಮಾನ ವೈಪರಿತ್ಯದಿಂದ ಫೆಂಗಲ್ ಚಂಡಮಾರುತ ಜೋರಾಗಿನೇ ಅಬ್ಬರಿಸುತ್ತಿದೆ. ಫೆಂಗಲ್ ಚಂಡಮಾರುತಕ್ಕೆ ಈಗಾಗಲೇ ಶ್ರೀಲಂಕಾ ತತ್ತರಿಸಿದೆ. ಶ್ರೀಲಂಕಾದಲ್ಲಿ ಅಬ್ಬರಿಸಿದ ಫೆಂಗಲ್ ಸುನಾಮಿ ಈಗ ತಮಿಳುನಾಡಿನತ್ತ ಮುಖ ಮಾಡಿದೆ. ತಮಿಳುನಾಡಿನಲ್ಲೂ ದೊಡ್ಡದಾಗಿ ಅಬ್ಬರಿಸುವ ಸೂಚನೆಯನ್ನ ಫೆಂಗಲ್ ಚಂಡಮಾರುತ ಕೊಟ್ಟಾಗಿದೆ. ಈ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ ಶ್ರೀಲಂಕಾ ಎಷ್ಟು ಸಾವು-ನೋವುಗಳನ್ನು ಕಂಡಿದೆ? ತಮಿಳುನಾಡು ಈ ಚಂಡಮಾರುತ ತಡೆಯಲು ಹೇಗೆಲ್ಲ ತಯಾರಿ ನಡೆಸಿದೆ ಅನ್ನೋದರ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಅಜ್ಜಿ ಅಬ್ಬರಿಸಿದ್ದ ಸಂಸತ್‌ಗೆ ಮೊಮ್ಮಗಳ ದೊಡ್ಡ ಹೆಜ್ಜೆ!, ಅದೇ ಚಹರೆ ಅದೇ ಕಿಚ್ಚು ಮತ್ತೆ ಬಂದ್ರಾ ಇಂದಿರಾ?

ಒಟ್ಟಿನಲ್ಲಿ ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗೆನೇ ಇದರ ಪ್ರಭಾವ ಕರ್ನಾಟಕಕ್ಕೂ ತಟ್ಟಲಿದೆ ಎಂದು ಎಚ್ಚರಿಸಲಾಗಿದೆ. ಹಾಗಿದ್ರೆ ರಾಜ್ಯಕ್ಕೆ ಫೆಂಗಲ್ ಚಂಡಮಾರುತ ಹೇಗೆಲ್ಲ ತೊಂದರೆ ನೀಡಲಿದೆ. 

ಒಂದು ವಾರದ ಹಿಂದೆ ಶ್ರೀಲಂಕಾದಲ್ಲಿ ಭಾರೀ ಪ್ರಮಾಣದಲ್ಲಿ ಫೆಂಗಲ್ ಚಂಡಮಾರುತ ಅಬ್ಬರಿಸಿದೆ. ಈಗ ತಮಿಳುನಾಡಿನಲ್ಲಿ ಈ ಚಂಡಮಾರುತದ ಪರಿಣಾಮ ನಿರಂತರ ಮಳೆ ಸುರಿಯುತ್ತಿದೆ. ಹಾಗಿದ್ರೆ ರಾಜ್ಯಕ್ಕೆ ಈ ಚಂಡಮಾರುತದಿಂದ ಏನೆಲ್ಲ ತೊಂದರೆ ಇದೆ. ಯಾವೆಲ್ಲ ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಅನ್ನೋದನ್ನು ಇಲ್ಲಿ ನೋಡೋಣ. 

ಈ ಫೆಂಗಲ್ ಚಂಡಮಾರುತ ಅತ್ಯಂತ ಭಯಾನಕವಾದ ಚಂಡಮಾರುತವಾಗಿದೆ. ಕ್ಷಣ ಕ್ಷಣಕ್ಕೂ ತಮ್ಮ ರೂಪ ಬದಲಿಸಬಲ್ಲ ಚಂಡಮಾರುತವಾಗಿದೆ. ಹಾಗೆನೇ ದೇಶದಲ್ಲಿ ತಮಿಳುನಾಡಿ ಮತ್ತು ಕರ್ನಾಟಕ ಅಷ್ಟೇ ಅಲ್ಲದೇ ಇನ್ನು ಕೆಲ ರಾಜ್ಯಗಳಿಗೆ ಭಯವನ್ನು ಹುಟ್ಟಿಸಿದೆ. 

ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲಾಗದೇ ಹೈರಾಣಾದ ಪಾಕ್ ಸೇನೆ

ತಮಿಳುನಾಡಿಲ್ಲಿ ಈಗಾಲಗೇ ತನ್ನ ಅಬ್ಬರವನ್ನು ಶುರುವಿಟ್ಟುಕೊಂಡಿದೆ. ಇನ್ನೇನು ರಾಜ್ಯಕ್ಕೆ ಎಂಟ್ರಿ ಕೊಡುವುದರಲ್ಲಿದೆ. ಈ ಎರಡು ರಾಜ್ಯಗಳ ಜೊತೆಗೆ ಪುದುಚೇರಿ, ಕೇರಳ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ ಈ ಫೆಂಗಲ್ ಚಂಡಮಾರುತ ತನ್ನ ಪ್ರಭಾವ ಬೀರಲಿದೆಯಂತೆ. 

ಹೌದು, ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ರಾಜ್ಯಗಳು ಡಿಸೆಂಬರ್ 5ರ ವರೆಗೆ ಎಷ್ಟು ಸಾಧ್ಯ ಅಷ್ಟು ಎಚ್ಚರಿಕೆ ವಹಿಸಿ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.