Apr 2, 2024, 5:28 PM IST
ಕರ್ನಾಟಕದ ಒಂದು ಮೂಲೆಯಲ್ಲಿ ಹುಟ್ಟಿದ ಒಂದು ಗುಸು ಗುಸು ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸಿತ್ತು. 1977ರಲ್ಲಿ ಆಗಷ್ಟೇ ಎಮರ್ಜೆನ್ಸಿ ಮುಗಿದು, ಇಂದಿರಾ ಗಾಂಧಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದರು. ಸಂಜಯ್ ಗಾಂಧಿ, ಇಂದಿರಾ ಗಾಂಧಿ ಇಬ್ಬರು ಸೋತಿದ್ದರು. ಈ ವೇಳೆ ಕಾಂಗ್ರೆಸ್‌ಗೆ ಬಲವಾಗಿದ್ದು ಈ ಕರ್ನಾಟಕ. 28 ಕ್ಷೇತ್ರಗಳ ಪೈಕಿ 26ರನ್ನು ಕಾಂಗ್ರೆಸ್ ಗೆದ್ದಿತ್ತು. ಅಂದು ಕರ್ನಾಟಕದ ಜನ ದೇವರಾಜ ಅರಸು ಅವರನ್ನು ನೋಡಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದರು. ಇವರು ರಾಜ್ಯ ಕಂಡ ದೀಮಂತ ನಾಯಕ.
ಇದನ್ನೂ ವೀಕ್ಷಿಸಿ: Katchatheevu Island Controversy: ಭಾರತದ ಭಾಗವಾಗಿದ್ದ ಕಚ್ಚತೀವು ಲಂಕಾ ಪಾಲಾಗಿದ್ದು ಹೇಗೆ..? ಏನಿದು ವಿವಾದ ?