ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

Dec 14, 2023, 1:07 PM IST

ಲೋಕಸಭೆಯಲ್ಲಿ ಬುಧವಾರ ಭಾರಿ ಭದ್ರತಾ ಲೋಪ ಸಂಭವಿಸಿದೆ. ಇನ್ನೂ ಈ ವಿಷಯದಲ್ಲಿ ಕಾಂಗ್ರೆಸ್‌(Congress) ರಾಜಕೀಯ ಮಾಡುತ್ತಿರುವಂತೆ ಕಾಣುತ್ತಿದೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜಕೀಯ ಕೆಸರೆರಚಾಟ ಸರಿಯಾದ್ದುದ್ದಲ್ಲ.ಅಲ್ಲದೇ ಈ ಹಿಂದೆ ಖಲಿಸ್ತಾನಿ ಉಗ್ರನ ಬೆದರಿಕೆ ಹಾಕಿದ್ರೂ, ಭದ್ರತಾ ವೈಫಲ್ಯವಾಗಿದೆ. ಲೋಕಸಭೆ ಭದ್ರತಾ ಲೋಪ(Lok Sabha security breach) ವಿಚಾರದಲ್ಲಿ ಆರೋಪಿಗಳು ಮೈಸೂರು ಸಂಸದ ಪ್ರತಾಪ್‌ ಸಿಂಹ(Pratap Simha) ಅವರಿಂದ ಪಾಸ್‌ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.ಇದರ ಬೆನ್ನಲ್ಲಿಯೇ ಕರ್ನಾಟಕ ಕಾಂಗ್ರೆಸ್‌ ಪ್ರತಾಪ್‌ ಸಿಂಹ ಕೂಡ ದಾಳಿಯಲ್ಲಿ ಭಾಗಿಯಾಗಿದ್ದು ತನಿಖೆ ಮುಗಿಯುವವರೆಗೂ ಅವರನ್ನು ಸಂಸತ್‌ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.ಇನ್ನೂ ಪ್ರಧಾನಿ ಮೋದಿ ಹಿರಿಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಮಾಹಿತಿ ಪಡೆದಿದ್ದಾರೆ.  

ಇದನ್ನೂ ವೀಕ್ಷಿಸಿ:  1929ರಲ್ಲೇ ಬಾಂಬ್ ಹಾಕಿದ್ದ ಭಗತ್ ಸಿಂಗ್: 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದಾಗ ಏನಾಗಿತ್ತು..?