ಮೋದಿಗೆ ಮುಂದೆ RSSನ ಅವಶ್ಯಕತೆ ಇಲ್ವಾ..? ನಿತಿನ್ ಗಡ್ಕರಿಯಿಂದ ಬಯಲಾಯ್ತಾ ಮೋದಿ-ಆರ್‌ಎಸ್ಎಸ್ ಮುನಿಸು?

Jul 14, 2024, 5:02 PM IST

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಲೋಕಸಭಾ ಚುನಾವಣೆ (Lok Sabha election) ನಂತರ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಂತಿದೆ. ಬಿಜೆಪಿ ನಾಯಕರಿಗೆ ಅಹಂಕಾರವೆಂದು ಆರ್‌ಎಸ್‌ಎಸ್ ನಾಯಕರು ಹೇಳ್ತಿದ್ದಾರೆ. ಆರ್‌ಎಸ್‌ಎಸ್‌ನ(RSS) ಅವಶ್ಯತೆ ನಮಗೆ ಬೇಕಾಗಿಲ್ಲವೆಂದು ಬಿಜೆಪಿ(BJP) ನಾಯಕರು ಹೇಳ್ತಿದ್ದಾರೆ. ಬಿಜೆಪಿ ಪಕ್ಷದ ಹುಟ್ಟಿಗೆ ಕಾರಣವೇ ಆರ್‌ಎಸ್‌ಎಸ್‌ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಿಜೆಪಿ ಒಂದು ರಾಜಕೀಯ ಪಕ್ಷವಾದರು ಸಹ, ಆರ್‌ಎಸ್‌ಎಸ್‌ ಸಿದ್ಧಾಂತಗಳ ಮೇಲೆ ನಿಂತಿರುವ ಪಕ್ಷ. ಹಾಗೆನೇ ಬಿಜೆಪಿ ಪಕ್ಷ ಮೊದಲಿನಿಂದಲೂ ಆರ್‌ಎಸ್‌ಎಸ್‌ ಕಂಟ್ರೋಲ್‌ನಲ್ಲಿ ಇದ್ದುಕೊಂಡೇ ಬಂದಿದೆ. ಆದ್ರೆ ಈಗ ಅದೆಲ್ಲವೂ ಬದಲಾಗುತ್ತಿದೆ ಅನ್ನೋ ಸುಳಿವು ಸಿಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈಗ ಬಿಜೆಪಿ ವರ್ಸಸ್ ಆರ್‌ಎಸ್‌ಎಸ್‌ ಆಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದ್ರೆ ಇತ್ತೀಚಿಗೆ ಆರ್‌ಎಸ್‌ಎಸ್‌ ನಾಯಕರಿಗು ಮತ್ತು ಮೋದಿಗೂ(Narendra Modi) ಹೊಂದಾಣಿಕೆ ಆಗ್ತಿಲ್ಲವಂತೆ. ಮೋದಿ ಆರ್‌ಎಸ್‌ಎಸ್‌ ಮಾತು ಕೇಳ್ತಿಲ್ಲವಂತೆ, ನಿಧಾನಕ್ಕೆ ಪಕ್ಷದಿಂದ ಆರ್‌ಎಸ್‌ಎಸ್‌ ಅನ್ನು ದೂರ ಇಡುತ್ತಿದ್ದಾರೆಂಬ ಆರೋಪಗಳು ಮೋದಿ ಮೇಲೆ ಕೇಳಿ ಬರುತ್ತಿವೆ. ಹಾಗೆನೇ ಮೋದಿಯ ಈ ನಡವಳಿಕೆಯಿಂದ ಆರ್‌ಎಸ್‌ಎಸ್‌ ನಾಯಕರು ಮೋದಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!