Ram Mandir: 500 ವರ್ಷಗಳ ಬಳಿಕ ಧರೆಗಿಳಿದ ಬಾಲರಾಮ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ರಾಮ ಜಪ

Jan 23, 2024, 10:06 AM IST

500 ವರ್ಷಗಳ ಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಪ್ರಭು ರಾಮನ ದರ್ಶನವಾಗಿದೆ. ಸೋಮವಾರ ನಡೆದ ಐತಿಹಾಸಿಕ ಕಾರ್ಯಕ್ರಮದ ಬಳಿಕ ಇಂದು ಸಾರ್ವಜನಿಕರಿಗೆ ರಾಮ ದರ್ಶನ ನೀಡಿದ್ದಾನೆ. ಇನ್ನೂ ಮಂದಿರ(Ram Mandir) ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್(Congress) ಹಾಗೂ ಇಂಡಿಯಾ(I.N.D.I.A) ಕೂಟದ ಇತರೆ ಪಕ್ಷಗಳು ತಮ್ಮ ಹಠವನ್ನ ಕೊನೆಗೂ ಸಾಧಿಸಿವೆ. ಇದರ ನಡುವೆ ಕರ್ನಾಟಕ ಸಿಎಂ ಸಿದ್ದರಾಮಯ್ಯ(Siddaramaiah) ರಾಮ ಜಪ ಮಾಡಿದ್ದಾರೆ. ಅಯೋಧ್ಯೆ(Ayodhya) ರಾಮಮಂದಿರ ಬೆಳಗ್ಗೆ 7 ರಿಂದ 11.30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ರಾತ್ರಿ 7.30ಕ್ಕೆ ಸಂಧ್ಯಾ ಆರತಿ ನಡೆಯುತ್ತದೆ. ಈ ಆರತಿಯನ್ನು ನೋಡಲು ಬಯಸುವವರು ಪಾಸ್‌ಗಳನ್ನು ಪಡೆಯಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನದಲ್ಲಿ ಪಾಸ್ ಲಭ್ಯ ಇರುತ್ತದೆ. ಶ್ರೀಕ್ಷೇತ್ರದ ವೆಬ್‌ಸೈಟ್ ಅಥವಾ ಗುರುತಿನ ಪುರಾವೆಯೊಂದಿಗೆ ಕ್ಯಾಂಪ್ ಆಫೀಸ್ ಅನ್ನು ಸಂಪರ್ಕಿಸಬಹುದು.

ಇದನ್ನೂ ವೀಕ್ಷಿಸಿ:  ನರೇಂದ್ರ ಮೋದಿ ಬಂದ ಮೇಲೆ ಹಿಂದೂಗಳ ಸ್ವಾಭಿಮಾನ ಜಾಗೃತವಾಗಿದೆ: ಅವಿಮುಕ್ತೇಶ್ವರಾನಂದ ಮಹಾರಾಜ್