ಚಂದ್ರಯಾನ -2 ತಲುಪಿದ ಸ್ಥಳ ಇನ್ಮುಂದೆ ತಿರಂಗಾ ಪಾಯಿಂಟ್‌: ಮೋದಿ ಘೋಷಣೆ

Aug 26, 2023, 11:08 AM IST

ಬೆಂಗಳೂರು: ಚಂದ್ರಯಾನ -2 ತಲುಪಿದ ಸ್ಥಳವನ್ನು ತಿರಂಗಾ ಪಾಯಿಂಟ್‌(Tiranga Point) ಎಂದು ಕರೆಯಲಾಗುತ್ತದೆಂದು ಇಸ್ರೋ(Isro) ವಿಜ್ಞಾನಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ(Narendra Modi) ಘೋಷಿಸಿದರು. ಈ ತಿರಂಗಾ ಪಾಯಿಂಟ್‌ ನಮ್ಮ ಸೋಲಲ್ಲ, ನಮ್ಮ ಅಂತ್ಯವೂ ಅಲ್ಲ. ದಕ್ಷಿಣ ಭಾರತದಿಂದ ಚಂದ್ರನ ದಕ್ಷಿಣ ಧ್ರುವದವರೆಗಿನ ಯಾತ್ರೆ ಸುಲಭವಾಗಿರಲಿಲ್ಲ. ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ವಿಕ್ರಮ್‌ನ(Vikram) ರೋವರ್‌ ಹಲವು ಪ್ರಯೋಗ ಮಾಡಿತ್ತು ಎಂದು ಪ್ರಧಾನಿ ಮೋದಿ ಹೇಳಿದರು. ಈ ಪಾಯಿಂಟ್‌ ಭಾರತದ ಪ್ರತಿಯೊಂದು ಪ್ರಯತ್ನಕ್ಕೆ ಸ್ಫೂರ್ತಿಯಾಗಿರಲಿದೆ. ಸಾಧಿಸುವ ಇಚ್ಛೆ ಇದ್ದರೇ ಅದಕ್ಕೆ ಸಫಲತೆ ದೊರೆಯಲಿದೆ ಎಂದು ಮೋದಿ ಹೇಳಿದರು.

ಇದನ್ನೂ ವೀಕ್ಷಿಸಿ:  PM Modi Isro Visit: ಇಸ್ರೋ ಅಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಸಂಭ್ರಮಿಸಿದ ಮೋದಿ