ಅಡಗುತ್ತಿದೆ "ಜಿದ್ದು" ಅಂದವರ ಸೇಡಿನ ಸದ್ದು..! ತೊಡೆ ತಟ್ಟಿದವರ ನಡು ಮುರಿಯುತ್ತಿದೆ ಭಾರತ..!

ಅಡಗುತ್ತಿದೆ "ಜಿದ್ದು" ಅಂದವರ ಸೇಡಿನ ಸದ್ದು..! ತೊಡೆ ತಟ್ಟಿದವರ ನಡು ಮುರಿಯುತ್ತಿದೆ ಭಾರತ..!

Published : Sep 22, 2023, 02:47 PM IST

ಏಟಿಗೆ ಏಟು..ಸ್ನೇಹಕ್ಕೆ ಸ್ನೇಹ..ಇದು ಬದಲಾದ ಭಾರತ..!
ಭಾರತದ ಶಕ್ತಿಗೆ ಸಾಕ್ಷಿ ನುಡಿಯುತ್ತಿದೆ ಕೆನಡಾ ಫೈಲ್ಸ್..!
ಕೆಣಕಿದ ಕೆನಡಾಗೆ ಮುಟ್ಟಿ ನೋಡಿಕೊಳ್ಳುವಂಥಾ ಉತ್ತರ..!

ಜಗತ್ತಿನ ಮುಂದೆ ಭಾರತ ಎದೆಯುಬ್ಬಿಸಿ ನಿಂತಿದೆ. ವರ್ಲ್ಡ್ ಲೀಡರ್ ಸ್ಥಾನದಲ್ಲಿ ನಿಂತು ಇಡೀ ಜಗತ್ತನ್ನೇ ಮುನ್ನಡೆಸುತ್ತಿದೆ. ಹಿಂದೆಲ್ಲಾ ಜಗತ್ತಿನ ದೊಡ್ಡಣ್ಣ ಯಾರು ಅಂತ ಕೇಳಿದ್ರೆ ಕಣ್ಮುಂದೆ ಬರ್ತಾ ಇದ್ದದ್ದು ಒಂದೇ ಉತ್ತರ. ಅದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ. ಆದ್ರೆ ಈಗ ಅಮೆರಿಕವೇ ಸಲಾಂ ಹೊಡೆಯುವ ರೀತಿಯಲ್ಲಿ ಭಾರತ ಬದಲಾಗಿದೆ. ಹಿಂದೆಲ್ಲಾ ಜಗತ್ತು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ್ರೂ, ಅಮೆರಿಕದ ಅಪ್ಪಣೆ ಪಡೆಯಬೇಕಿತ್ತು. ಶ್ರೀಮಂತ ರಾಷ್ಟ್ರಗಳ ಸಲಹೆ, ಸೂಚನೆಗಳಿಗೆ ಮಾತ್ರ ಕಿಮ್ಮತ್ತಿತ್ತು. ಆದ್ರೀಗ ಕಾಲ ಬದಲಾಗಿದೆ. ಬದಲಾದ ಕಾಲಘಟ್ಟದಲ್ಲಿ ದಿ ವರ್ಲ್ಡ್ ಲೀಡರ್ ಸ್ಥಾನದಲ್ಲಿ ನಿಂತಿದೆ ನಮ್ಮ ಹೆಮ್ಮೆಯ ಭಾರತ. ಬದಲಾದ ಭಾರತದ ಪವರ್ ಹೇಗಿದೆ ಅಂದ್ರೆ, ಯಾವುದೇ ದೇಶ ಏನೇ ಮಹತ್ವದ ನಿರ್ಣಯ ತೆಗೆದುಕೊಳ್ಳೋ ಸಂದರ್ಭದಲ್ಲಿ ಭಾರತದ(India) ನಿಲುವಿಗೆ ಮಣೆ ಹಾಕುವಷ್ಟರ ಮಟ್ಟಿಗೆ ದೇಶ ಬದಲಾಗಿದೆ. ಈ ಬದಲಾವಣೆಯ ಹರಿಕಾರ, ಗಂಡೆದೆಯ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra modi). ದೇಶದ ಶತ್ರು ಈಗ ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿರ್ಲಿ, ಭಾರತೀಗ ನುಗ್ಗಿ ಹೊಡೆಯುತ್ತಿದೆ. ತೊಡೆ ತಟ್ಟಿ ನಿಂತವರ ನಡು ಮುರಿಯುತ್ತಿದೆ, ಸವಾಲ್ ಹಾಕಿ ನಿಂತವರ ಸದ್ದನ್ನೇ ಅಡಗಿಸಿ ಬಿಡುತ್ತಿದೆ. ಇದಕ್ಕೆ ಸಾಕ್ಷಿ ಕೆನಡಾ (Canada) ಫೈಲ್ಸ್. ಹೌದು ವೀಕ್ಷಕರೇ.. ಕೆನಡಾದಲ್ಲಿ ಕಳೆದ ಜೂನ್ ತಿಂಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಎಂಬವನ ಹತ್ಯೆ ನಡೆದಿತು.

ಇದನ್ನೂ ವೀಕ್ಷಿಸಿ:  ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉತ್ತರ ಕೊಡ್ತಾರಾ ಕೆನಡಾ ಜನ!ಎಡವಟ್ ರಾಜನಿಗೆ ಏನಂತ ಹೇಳಿದ್ರು ಸ್ನೇಹಿತರು?

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more