2024ರ ಮಹಾಯುದ್ಧಕ್ಕೆ..ಮೋದಿಗೆ ಗ್ಯಾರಂಟಿ ಶಕ್ತಿ..!ಕುಗ್ಗಿಲ್ಲ ನಮೋ ಹವಾ..ದೇಶದಲ್ಲಿ ತಗ್ಗಿಲ್ಲ ಬಿಜೆಪಿ ಬಲ!

Dec 4, 2023, 2:11 PM IST

ಪ್ರಧಾನಿ ನರೇಂದ್ರ ಮೋದಿ ಸಮಿಫೈನಲ್‌ನಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ. ಭಾನುವಾರ 4 ರಾಜ್ಯಗಳ ಎಲೆಕ್ಷನ್ ರಿಸಲ್ಟ್(Election Result) ಬಂದಿದೆ. ನಾಲ್ಕರಲ್ಲಿ ಬಿಜೆಪಿ(BJP) ಮೂರು ರಾಜ್ಯಗಳಲ್ಲಿ ಅದ್ದೂರಿ ಗೆಲುವು ಸಾಧಿಸಿದೆ. ಈ ಮೂಲ ಮೋದಿ ಹವಾ ಕುಗ್ಗಿಲ್ಲ ಅನ್ನೋದು ತಿಳಿದಿಂತಾಗಿದೆ. ದೇಶದಲ್ಲಿ ಬಿಜೆಪಿ ಬಲ ತಗ್ಗಿಲ್ಲ ಅನ್ನೋದು ಸಹ ಸಾಬೀತಾಗಿದೆ. ಮಧ್ಯಪ್ರದೇಶ,ರಾಜಸ್ಥಾನ, ಛತ್ತೀಸ್‌ಗಢ್, ತೆಲಂಗಾಣ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ರಿಸಲ್ಟ್ ಹೊರ ಬಿದ್ದಿದೆ. ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಮೂರರಲ್ಲಿ ಭರ್ಜರಿ ಗೆಲುವು ಕಂಡಿದೆ. ತೆಲಂಗಾಣವೊಂದನ್ನು ಹೊರತುಪಡಿಸಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ತೆಂಗಾಣದಲ್ಲಿ ಮಾತ್ರ ಕಾಂಗ್ರೆಸ್ (Congress) ಸಮಾಧಾನಕರ ಗೆಲುವು ಕಂಡಿದೆ. ಈ ಮೂಲಕ ದೇಶದಲ್ಲಿ ಮೋದಿ ಹವಾ ಕಡಿಮೆ ಆಯ್ತು ಅಂದವರಿಗೆ ತಕ್ಕನಾದ ಉತ್ತರ ಸಿಕ್ಕಿದೆ. ಈ ನಾಲ್ಕು ರಾಜ್ಯಗಳ ಎಲೆಕ್ಷನ್ ರಿಸಲ್ಟ್ ಅನ್ನು ಸೆಮಿಫೈನಲ್ ಎಂದೇ ಹೇಳಲಾಗುತ್ತಿತ್ತು. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ನಲ್ಲಿ ನಡೆಯಲಿರುವ ಲೋಕಸಭಾ ಎಲೆಕ್ಷನ್ನ(Loksabha election) ಪೂರ್ವ ಫಲಿತಾಂಶವೆಂದೇ ಬಿಂಬಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಈ ನಾಲ್ಕು ರಾಜ್ಯಗಳ ರಿಸಲ್ಟ್ ತುಂಬಾನೇ ಮುಖ್ಯವಾಗಿತ್ತು. ಅದರಲ್ಲೂ ರಾಹುಲ್ ಮತ್ತು ಮೋದಿ ಇಬ್ಬರಿಗೂ ಅತ್ಯಂತ ಪ್ರಮುಖವಾದ ರಿಸಲ್ಟ್ ಇದಾಗಿತ್ತು. ಈ ಮಹತ್ವದ ಚುನಾವಣೆಯಲ್ಲಿ ಮೋದಿ(Narendra Modi) ಗೆದ್ದಿದ್ದಾರೆ. ನಾಲ್ಕರಲ್ಲಿ ರಾಹುಲ್ ಒಂದು ರಾಜ್ಯ ಗೆದ್ದು ಸಮಾಧಾನ ಮಾಡಿಕೊಂಡ್ರೆ, ಮೋದಿ ಮೂರು ರಾಜ್ಯಗಳಲ್ಲಿ ಅದ್ದೂರಿ ಗೆಲುವು ಸಾಧಿಸಿದ್ದಾರೆ. ಮೂರು ರಾಜ್ಯಗಳ ಈ ಅದ್ದೂರಿ ಗೆಲುವು ಮೋದಿಗೆ ಭೀಮ ಬಲವನ್ನು ತಂದುಕೊಟ್ಟಿದೆ. 

ಇದನ್ನೂ ವೀಕ್ಷಿಸಿ:  ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕರ್ನಾಟಕಕ್ಕೆ ಸಂದೇಶ ಏನು..? ವಿಧಾನಸಭೆ ಸೋತ ಬಿಜೆಪಿ ಲೋಕಸಭೆ ಗೆಲ್ಲುತ್ತಾ..?