Biporjoy Cyclone:ಗುಜರಾತ್‌ನಲ್ಲಿ ಬಿಪರ್‌ಜಾಯ್‌ ಅಬ್ಬರ: ಹೈ ಅಲರ್ಟ್‌ ಘೋಷಣೆ..ಮೂವರು ಬಲಿ

Jun 13, 2023, 11:56 AM IST

ಗುಜರಾತ್‌ ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ ಜೋರಾಗಿದ್ದು, ಗಂಟೆಗೆ 150 ಕಿ.ಮೀ ಶರವೇಗದಲ್ಲಿ ಗಾಳಿ ಬೀಸುತ್ತಿದೆ. ಜೂನ್‌ 15ಕ್ಕೆ ಕಛ್‌ನ ಬಂದರಿಗೆ ಚಂಡಮಾರುತ ಅಪ್ಪಳಿಸಲಿದೆ. ಕಡಲ ತೀರದಿಂದ 7500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ 3 ಜನ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗುಜರಾತ್​​​​ನಲ್ಲಿ ಹೈಅಲರ್ಟ್​ ಘೋಷಣೆ ಮಾಡಲಾಗಿದೆ. ಸೌರಾಷ್ಟ್ರ-ಕಳ್ ಕರಾವಳಿಗಳ ಮಾಂಡವಿ-ಜಖಾವು ಬಂದರು ಸಮೀಪ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಜೂನ್ 14ರಂದಿಲೇ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ್, ರಾಜ್ ಕೋಟ್, ಜುನಾಗಢ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಚಂಡಮಾರುತದ ಹಾವಳಿಗೆ ಒಳಗಾಗಲಿವೆ.

ಇದನ್ನೂ ವೀಕ್ಷಿಸಿ: ರಣ್‌ಬೀರ್‌ ಹೆಣ್ಣುಬಾಕ ಎಂದ ಕಂಗನಾ: ಯಶ್‌ ರಾವಣ ಅಲ್ಲ, ರಾಮನ ಪಾತ್ರ ಮಾಡಲಿ..!