ಬೆಂಗಳೂರು ಮೂಲದ ಕ್ವೆಸ್ ಕಾರ್ಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಶ್ರೀನಿವಾಸನ್ ಅವರು ಏಷ್ಯಾನೆಟ್ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ಬೆಂಗಳೂರು (ಅ. 30): ಸಿಲಿಕಾನ್ ಸಿಟಿ ಬೆಂಗಳೂರು ಕ್ವೆಸ್ ಕಾರ್ಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಗುರುಪ್ರಸಾದ್ ಶ್ರೀನಿವಾಸನ್ ಅವರು ಏಷ್ಯಾನೆಟ್ ನ್ಯೂಸ್-ಇನ್ ಸಂದರ್ಶನದಲ್ಲಿ ಭಾಗವಹಿಸಿದ್ದರು. 14 ವರ್ಷಗಳಲ್ಲಿ ಕಂಪನಿಯ ಯಶಸ್ಸು, ನಿರುದ್ಯೋಗ ತಗ್ಗಿಸುವಲ್ಲಿ ಕೊಡುಗೆ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕುರಿತು ಮಾಹಿತಿ ಹಂಚಿಕೊಂಡರು. ದೇಶದಲ್ಲಿನ ನಿರುದ್ಯೋಗ ಸಮಸ್ಯೆಗಳ ಕುರಿತಾಗಿ ಹಾಗೂ ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ವಿವಿಧ ಮಾಹಿತಿಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವೀಡಿಯೊವನ್ನು ಇಲ್ಲಿ ವೀಕ್ಷಿಸಿ!