Jan 19, 2024, 6:52 PM IST
ಈ ಸಂದರ್ಶನದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಮೂರ್ತಿ ಕೆತ್ತನೆ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ್ದಾರೆ. ನಾವು ಮೂರ್ತಿ ಕೆತ್ತನೆಗೆ ಇಲ್ಲಿತನಕ ಯಾವುದೇ ಸಂಭಾವನೆ ಪಡೆದಿಲ್ಲ. ಅವರು ಏನೇ ಕೊಟ್ಟರೂ ತೆಗೆದುಕೊಳ್ಳುತ್ತೇವೆ ಎಂದು ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಹೇಳಿದ್ದಾರೆ. ಈ ಕೆಲಸ ಸಿಕ್ಕಿರುವುದು ನನ್ನ ಪುಣ್ಯವಾಗಿದೆ. ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ(Ram Lalla Murti) ಕೆತ್ತನೆ ಮಾಡಲಾಗಿದೆ. ಮಕ್ಕಳನ್ನು ಅಧ್ಯಯನ ಮಾಡಿದ ಬಳಿಕ ಮೂರ್ತಿಯ ಕಲ್ಪನೆ ಮೂಡಿತು. ಈ ಕಲ್ಪನೆಯಲ್ಲಿಯೇ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದೇನೆ. ಮೂರ್ತಿ ಕೆತ್ತನೆಗೆ ವಿಶ್ವದೆಲ್ಲೆಡೆಯಿಂದ ಕಲ್ಲು ನೀಡಲು ಸಿದ್ಧರಿದ್ದರು. ಆದರೆ ಮೂರ್ತಿ ಕೆತ್ತನೆಗೆ ಕರ್ನಾಟಕದ (Karnataka) ಕಲ್ಲು ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ನಮ್ಮೂರಿನ ಬಡ ರೈತನ ಜಮೀನಿನ ಕಲ್ಲು ರಾಮನ ಮೂರ್ತಿಯಾಗಿದ್ದು ಸಂತೋಷವಾಗಿದೆ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಕರಸೇವಕರಿಗೆ ಹೇಗೆ ಸಿಕ್ಕಿತ್ತು ಅಯೋಧ್ಯೆವಾಸಿಗಳ ಸ್ವಾಗತ..? ನೆತ್ತರು ಹರಿದ ದಿನವೇ ಮತ್ತೊಂದು ಸಂಕಲ್ಪ!