Dec 12, 2023, 10:41 AM IST
ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ ಬ್ರಹ್ಮಾಸ್ತ್ರವೊಂದು ಸಿಕ್ಕಿದೆ. ಮೋದಿ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಆರ್ಟಿಕಲ್ 370 ಅಗ್ನಿಪರೀಕ್ಷೆಯನ್ನು ಮೋದಿ ಸರ್ಕಾರ ಗೆದ್ದಿದೆ. ರಾಜ್ಯಸಭೆಯಲ್ಲಿ ಮತ್ತೆ ಪಾಕ್ ಆಕ್ರಮಿತ ಕಾಶ್ಮೀರದ(Jammu and Kashmir) ಬಗ್ಗೆ ಪ್ರತಿಧ್ವನಿಸಲಾಗಿದೆ. ಪಿಒಕೆಯನ್ನು ಯಾರೂ ನಮ್ಮಿಂದ ಕಿತ್ತುಕೊಳ್ಳಲು ಆಗಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಬಿಟ್ಟುಕೊಡಲ್ಲ ಎಂದು ರಾಜ್ಯಸಭೆಯಲ್ಲಿ(Rajyasabhe) ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. 370ನೇ ವಿಧಿ ಪರ ಇರುವವರಿಗೆ ಕೋರ್ಟ್ ಛೀಮಾರಿ ಹಾಕಿದೆ. ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಕಾಂಗ್ರೆಸ್‌ನವರು ಸುಪ್ರೀಂ ತೀರ್ಪು ಒಪ್ಪುವ ಸ್ಥಿತಿಯಲಿಲ್ಲ. ಆರ್ಟಿಕಲ್ 370ನೇ ವಿಧಿ ನೆಹರು ಕಾಲದ ಮಹಾ ಪ್ರಮಾದ. ನೆಹರೂ ನಿರ್ಧಾರದಿಂದ ಪಾಕ್ ದಾಳಿ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ನೆಹರೂ ಮಾಡಿದ ತಪ್ಪಿಗೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಅಮಿತ್ ಶಾ ಹೇಳಿದರು. ಕಾಶ್ಮೀರಿ ಪಂಡಿತರಿಗೂ ಗೃಹ ಸಚಿವ ಅಮಿತ್ ಶಾ ಅಭಯ. ಕಾಶ್ಮೀರಿ ಪಂಡಿತರ ಬೆನ್ನಿಗೆ ಮೋದಿ ಸರ್ಕಾರ ನಿಲ್ಲುತ್ತೆ. ಕಾಶ್ಮೀರಿ ಪಂಡಿತರಿಗೆ ಎಲ್ಲಾ ಹಕ್ಕುಗಳನ್ನು ವಾಪಸ್ ನೀಡ್ತೇವೆ ಎಂದು ಹೇಳಿದರು.
ಇದನ್ನೂ ವೀಕ್ಷಿಸಿ: ಆರ್ಟಿಕಲ್ 370 ರದ್ದು ಸುಪ್ರೀಂಕೋರ್ಟ್ ಆದೇಶ ಏನು..? 'ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ'