ಮೋದಿ..ಅದಾನಿ ವಿರುದ್ಧ ಗುಡುಗಿದ್ರೆ ಸಂಸದೆಗೆ ದುಡ್ಡು ಸಿಕ್ತಿತ್ತಾ..? ಬಿಜೆಪಿ ನಾಯಕನಿಂದ  ಗಂಭೀರ ಆರೋಪ!

ಮೋದಿ..ಅದಾನಿ ವಿರುದ್ಧ ಗುಡುಗಿದ್ರೆ ಸಂಸದೆಗೆ ದುಡ್ಡು ಸಿಕ್ತಿತ್ತಾ..? ಬಿಜೆಪಿ ನಾಯಕನಿಂದ ಗಂಭೀರ ಆರೋಪ!

Published : Oct 21, 2023, 02:21 PM IST

ಸಂಸತ್‌ನಲ್ಲಿ ಪ್ರಶ್ನೆ ಕೇಳೋಕೂ ಲಂಚ ಪಡೀತಾರಂತೆ ಮಹುವಾ!
ಬಿಜೆಪಿ ನಾಯಕನಿಂದ ಕೇಳಿ ಬಂತು ಘನ ಗಂಭೀರ ಆರೋಪ!
ದುಡ್ಡು  ಪಡೆದು ಸಂಸತ್‌ನಲ್ಲಿ ಪ್ರಶ್ನೆ ಮಾಡಿದ್ರಂತೆ ಮಹುವಾ!

ಮಹುವಾ ಮೊಯಿತ್ರಾ(Mahua Moitra ) ತೃಣಮೂಲ ಕಾಂಗ್ರೆಸ್ ನಾಯಕಿ. ಪಶ್ಚಿಮ ಬಂಗಾಳದ, 42 ಲೋಕಸಭಾ ಕ್ಷೇತ್ರಗಳ  ಪೈಕಿ ಒಂದಾಗಿರೋ ಕೃಷ್ಣ ನಗರದ ಸಂಸದೆ. ಈಕೆ ಸದನದಲ್ಲಿ ಮಾತಾಡ್ತಾ ಇದಾರೆ ಅಂದ್ರೆ ಏನೋ ಮೋದಿ(Narendra Modi) ಸರ್ಕಾರದ ವಿರುದ್ಧ  ಗುಡುಗ್ತಾ ಇದಾರೆ ಅಂತಲೇ ಅರ್ಥ. ಅಮೆರಿಕಾದ ಮಲ್ಟಿನ್ಯಾಷನಲ್ ಫೈನಾನ್ಷಿಯಲ್ ಕಂಪನಿ, ಜೆಪಿ ಮಾರ್ಗನ್‌ನಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡ್ತಾ ಇದ್ದ ಮಹುವಾ, 2009ರಲ್ಲಿ ಆ ಕೆಲಸ ಬಿಟ್ಟು ಭಾರತದಲ್ಲಿ ರಾಜಕೀಯ ಮಾಡೋಕೆ ಮುಂದಾಗ್ತಾರೆ. ಆರಂಭದಲ್ಲಿ ಕಾಂಗ್ರೆಸ್‌ನ(Congress), ಇಂಡಿಯನ್ ಯೂತ್ ಕಾಂಗ್ರೆಸ್‌ನಲ್ಲಿ ಗುರ್ತಿಸಿಕೊಂಡೋರು, 2010ರಲ್ಲಿ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗ್ತಾರೆ. ಅದಾದ ಬಳಿಕ, ವಿಧಾನಸಭೆ ಗೆದ್ದು, ಅದರ ಬೆನ್ನಲ್ಲೇ 2019ರಲ್ಲಿ ಲೋಕಸಭೆಯನ್ನೂ  ಗೆದ್ದು ಸಂಸತ್ ಪ್ರವೇಶ ಮಾಡ್ತಾರೆ. ಸಂಸತ್  ಪ್ರವೇಶ ಮಾಡಿರೋದೇ ಮೋದಿ ಸರ್ಕಾರದ ವಿರುದ್ಧ ಗುಡುಗೋದಕ್ಕೆ ಅನ್ನೋ ಹಾಗೆ, ಮಹುವಾ ಮೊಯಿತ್ರಾ ಮಾತಾಡ್ತಾರೆ. ಮೋದಿ ಸರ್ಕಾರವನ್ನ ಕಟುವಾಗಿ ಟೀಕಿಸೋರ ಲಿಸ್ಟ್ ಓಪನ್ ಮಾಡಿದ್ರೆ, ಅದರಲ್ಲಿ ಮಹುವಾ ಅವರ ಹೆಸರು ಇರ್ಲೇಬೇಕು. ವಿರೋಧ ಪಕ್ಷ ಅಂದ್ರೆನೇ, ರಚನಾತ್ಮಕ ಟೀಕೆ ಮಾಡೋ ಪಕ್ಷ ಅಂತ ಅರ್ಥ. ಆ ಕೆಲಸವನ್ನೇ ಮಹುವಾ ಮಾಡ್ತಿದಾರೆ ಅನ್ನೋದು ಹಲವರ ಅಭಿಪ್ರಾಯ. ಆದ್ರೆ ಇಂಥಾ ಮಹುವಾ ವಿರುದ್ಧ ಈಗ ಘನಘೋರ ಆರೋಪವೊಂದು ಕೇಳಿಬಂದಿದೆ. ಅದು ಬರೀ ಮಹುವಾ ಅವರಿಗಷ್ಟೇ ಅಲ್ಲ, ದೇಶದ ಘನತೆಗೆ ಧಕ್ಕೆ ತರೋ ಹಾಗಿದೆ.

ಇದನ್ನೂ ವೀಕ್ಷಿಸಿ:  15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more