ಕತಾರ್‌ನಲ್ಲಿ ಗಲ್ಲಿಗೆ ಗುರಿಯಾಗಿದ್ದ ಭಾರತೀಯರಿಗೆ ರಿಲೀಫ್: ಆರೋಪ ಮುಕ್ತಗೊಳಿಸಿ ಬಿಡುಗಡೆ !

Feb 13, 2024, 11:19 AM IST

ಮುಸ್ಲಿಂ ದೇಶ ಕತಾರ್‌ನಲ್ಲಿ ಭಾರತಕ್ಕೆ(India) ಅತಿದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಭಾರತೀಯರು ರಿಲೀಸ್ ಆಗಿದ್ದಾರೆ. ಪ್ರಧಾನಿ ಮೋದಿ(Narendra Modi), ಜೈಶಂಕರ್ ರಾಜತಾಂತ್ರಿಕತೆ, ದೋವಲ್ ತಂತ್ರಗಾತಿಕೆ ಫಲ ನೀಡಿದೆ. ಸದ್ಯ ಕತಾರ್‌ನಲ್ಲಿ(Qatar) ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 7 ನಿವೃತ್ತ ಯೋಧರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ನಿವೃತ್ತ ಯೋಧರು ಬಂದಿಳಿದಿದ್ದು, ತಮ್ಮ ಕುಟುಂಬದವರನ್ನು ಸೇರಿದ್ದಾರೆ. 18 ತಿಂಗಳಿನಿಂದ ಕತಾರ್‌ನಲ್ಲಿ ಜೈಲು(Jail) ವಾಸ ಅನುಭವಿಸುತ್ತಿದ್ದರು. ಕತಾರ್‌ನಲ್ಲಿ ಇಸ್ರೇಲ್(Israel) ಪರವಾಗಿ ಬೇಹುಕಾರಿಗೆ ನಡೆಸಿದ ಆರೋಪ ಇವರ ಮೇಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 3 ಬಾರಿ ಕತಾರ್‌ಗೆ ಭೇಟಿ ನೀಡಿದ್ದರು. ಮುಸ್ಲಿಂ ದೇಶಗಳಲ್ಲಿ ವಿದೇಶಿಯರಿಗೆ ಗಲ್ಲು ಶಿಕ್ಷೆಯಾದ್ರೆ ಮೃತದೇಹವೂ ಸಿಗೋದಿಲ್ಲ. ಅದರಲ್ಲೂ ಬೇಹುಗಾರಿಕೆ ಆರೋಪದಲ್ಲಿ ಸಿಲುಕಿದರೆ ಕ್ಷಮಾಧಾನ ದೂರದ ಮಾತಾಗಿದೆ.

ಇದನ್ನೂ ವೀಕ್ಷಿಸಿ:  Pakisthan Election: ನಾನು VS ನೀನು.. ಯಾರ ಪಾಲಾಗಲಿದೆ ಪಾತಕಿದೇಶದ ಗದ್ದುಗೆ ..?