Lok Sabha elections 2024: ಕ್ಲೈಮ್ಯಾಕ್ಸ್ ಹಂತ ತಲುಪಿದ ಲೋಕಸಭಾ ಮಹಾಸಮರ: ಇಂದೇ ಹೊರಬೀಳಲಿದೆ ಎಕ್ಸಿಟ್ ಪೋಲ್ ಭವಿಷ್ಯ!

Jun 1, 2024, 11:36 AM IST

ಲೋಕಸಭೆ ಅಖಾಡದ (Lok Sabha Elections 2024) ಫೈನಲ್ ಫೇಸ್ ಚುನಾವಣೆ ಇಂದು ನಡೆಯುತ್ತಿದ್ದು, ಈ ಮಹಾಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಅಂದರೆ ಇಂದು ದೇಶದ 543 ಕ್ಷೇತ್ರಗಳ ಮತದಾನ ಪೂರ್ಣಗೊಳ್ಳಲಿದ್ದು,  ಈಗಾಗಲೇ 6 ಹಂತದ ವೋಟಿಂಗ್ (Voting)ಮುಕ್ತಾಯವಾಗಿದೆ. ಇಂದು ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ  ಮೋದಿ ಭವಿಷ್ಯವೂ ನಿರ್ಧಾರ ಆಗಲಿದೆ. ಯಾಕೆಂದರೆ ಪ್ರಧಾನಿ ಮೋದಿ (Narendra Modi) ಕ್ಷೇತ್ರ ವಾರಾಣಸಿಯಲ್ಲೂ ಇಂದೇ ಮತದಾನ ನಡೆಯುತ್ತಿದೆ. 

ಇಂದು 8 ರಾಜ್ಯಗಳ 57 ಕ್ಷೇತ್ರಗಳ 904 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದ್ದು, ಪ್ರಧಾನಿ ಮೋದಿ ಸೇರಿ ಹಲವು ದಿಗ್ಗಜರ ಭವಿಷ್ಯವನ್ನು ಇಂದು ನಿರ್ಧಾರ ಮಾಡಲಿದ್ದಾರೆ ಮತದಾರರು. ಜೊತೆಗೆ ಇಂದು ಸಂಜೆ 6 ಗಂಟೆಗೆ ಅಂತಿಮ ಹಂತದ ಮತದಾನಕ್ಕೆ ತೆರೆ ಎಳೆಯಲಾಗುತ್ತಿದ್ದು,  543 ಕ್ಷೇತ್ರಗಳಿಗೆ 2 ತಿಂಗಳುಗಳ ಕಾಲ ಮತದಾನ ನಡೆದಿದೆ. ಮತ್ತು ಜೂನ್ 4ಕ್ಕೆ 18ನೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಇಂದು ಈ ಲೋಕ ಸಮರದ ಎಕ್ಸಿಟ್ ಪೋಲ್ ಬಗ್ಗೆ ಮಾಹಿತಿ ತಿಳಿಯಲಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು ವಿಚಾರ: ಸಿಎಂ, ಡಿಸಿಎಂ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್‌