ಆತನ ಗೆಲುವು ಬರೆದಿತ್ತು ಇತಿಹಾಸ! ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆ!

Dec 8, 2023, 2:55 PM IST

ನಾವಿವತ್ತು ನಿಮಗೆ ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆಯ ಕತೆ ಹೇಳ್ತಾ ಇದೀವಿ. 7 ಬಾರಿ ಶಾಸಕರಾಗಿದ್ದವರನ್ನಅದೊಂದು ಫೋಟೋ ಹೇಗೆ ಮಣಿಸಿತ್ತು ಅನ್ನೋದನ್ನ ತೋರಿಸ್ತೀವಿ. ಕೇಸರಿ ಪಡೆಗೆ ಮತ್ತೊಬ್ಬ ಯೋಗಿ ಬಾಬಾ ಸಿಕ್ಕಿದ್ದಾರೆ ಅನ್ನೋ ಮಾತಿನ ಹಿಂದಿರೋ ಅಸಲಿಯತ್ತು ತೋರಿಸ್ತೀವಿ. ರಾಷ್ಟ್ರ ರಾಜಕಾರಣದ ದಿಕ್ಕು ದೆಸೆ ನಿರ್ಧರಿಸೋ ಚುನಾವಣೆಗಳು ಮುಗಿದಿವೆ. ಅದರ ರಿಸಲ್ಟ್ ಕೂಡ ಬಂದಾಗಿದೆ. ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress), ಈ ಎರಡೂ ರಾಷ್ಟ್ರೀಯ ಪಕ್ಷಗಳು ಈ ಚುನಾವಣೆಗಳನ್ನ ಘನಗಂಭೀರವಾಗಿ ಪರಿಗಣಿಸಿದ್ವು. ಇಲ್ಲಿನ ಸೋಲು ಗೆಲುವು, ಆಯಾ ಪಕ್ಷಗಳ ಭವಿಷ್ಯವನ್ನೇ ನಿರ್ಧರಿಸಲಿವೆ ಅಂತ ಭಾವಿಸಲಾಗಿತ್ತು. ಅಂತೂ ಫಲಿತಾಂಶ ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ( Chhattisgarh) ಈ ಮೂರೂ ರಾಜ್ಯಗಳಲ್ಲಿ ಕಮಲ ಅರಳಿ ಕಿಲಕಿಲ ಅಂತ ನಗ್ತಾ ಇದ್ರೆ, ತೆಲಂಗಾಣದಲ್ಲಿ(Telangana) ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಗಳಿಸಿದೆ.. ಇನ್ನು ಮಿಜೋರಾಂನಲ್ಲಿ ಮೊಟ್ಟ ಮೊದಲ ಬಾರಿಗೆ, ಜೋರಾಮ್ ಪೀಪಲ್ಸ್ ಮೂಮೆಂಟ್ ಅಧಿಕಾರ ಸ್ಥಾಪನೆ ಮಾಡಿದೆ. ಪಂಚರಾಜ್ಯಗಳಲ್ಲಿ ಪಂಚಾಮೃತ ಸಿಕ್ಕಿರೋದು ಕಮಲ ಪಾಳಯಕ್ಕೇನೇ.. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆಯಾದ್ರೂ, ಬಿಜೆಪಿ ಬೇಸರಪಟ್ಟಿಕೊಳ್ಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ಕಳೆದ ಚುನಾವಣೆಲಿ ಒಂದು ಸೀಟು ಗಳಿಸೋಕೂ ಹೆಣಗಾಡ್ತಾ ಇದ್ದ ಬಿಜೆಪಿ ಈ ಬಾರಿ ಒಟ್ಟು 8 ಸೀಟು ದಕ್ಕಿಸಿಕೊಂಡಿದೆ. ನೆಲೆಯೇ ಇಲ್ಲದ ರಾಜ್ಯದಲ್ಲೂ 7 ಸೀಟ್ ಹೆಚ್ಚಿಸಿಕೊಂಡು ಬಲಪ್ರದರ್ಶನ ಮಾಡಿದೆ.

ಇದನ್ನೂ ವೀಕ್ಷಿಸಿ:  ಕಾಮಾಲೆಯಿಂದ ಸತ್ತ ಅಂದುಕೊಂಡಿದ್ದರು ಎಲ್ಲರೂ..! ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೊಟ್ಟಿತ್ತು ಸುಳಿವು..!