ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

Jul 2, 2024, 4:51 PM IST

ಭಾರತದ ಕಾನೂನು ವ್ಯವಸ್ಥೆಯಲ್ಲಿ ಹೊಸ ಯುಗಾರಂಭವಾಗಿದೆ. ಬ್ರಿಟಿಷರ ಕಾಲದ ಪ್ರಮುಖ ಮೂರು ಕ್ರಿಮಿನಲ್ ಲಾಗಳು ನೇಪಥ್ಯೆಕ್ಕೆ ಸರಿದಿವೆ. ಇದರ ಬದಲಾಗಿ ಭಾರತೀಯರಿಗಾಗಿ ಮೂರು ಹೊಸ ಕಾನೂನು ವ್ಯವಸ್ಥೆ ಜಾರಿಗೊಂಡಿವೆ. 2024, ಜುಲೈ 1 ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ(Indian Judicial System) ಹೊಸ ಯುಗಾರಂಭವಾದ ದಿನ. ಮೂರು ಹೊಸ ಕಾನೂನಿನಡಿಯಲ್ಲೇ ಕೇಸ್‌ಗಳು ದಾಖಲಾಗಲಿವೆ. ಐಪಿಸಿ, ಅಂದ್ರೆ ಇಂಡಿಯನ್ ಪೀನಲ್ ಕೋಡ್ ಜಾರಿಯಲ್ಲಿರುವುದಿಲ್ಲ. ಇದರ ಜೊತೆ ಇನ್ನೂ ಎರಡು ಪ್ರಮುಖ ಕ್ರಿಮಿನಲ್ ಲಾ ಗಳಾದ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ (Code of Criminal Procedure) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್(Indian Evidence Act), ಪ್ರಮುಖ ಬದಲಾದ ಮೂರು ಕಾನೂನುಗಳು ಇರಲಿವೆ. ಜುಲೈ 1 ರಿಂದ ದೇಶದಲ್ಲಿ ದಾಖಲಾಗುವ ಕೇಸ್‌ಗಳೆಲ್ಲ ಐಪಿಸಿ ಬದಲಿಗೆ ಬಿಎನ್‌ಎಸ್‌ನ (BNS) ಅಡಿಯಲ್ಲಿ ದಾಖಲಾಗುತ್ತವೆ. ಅಂದ್ರೆ ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೇಸ್‌ಗಳು ದಾಖಲಾಗಲಿವೆ. ಭಾರತೀಯ ದಂಡ ಸಂಹಿತೆ ದೇಶದಲ್ಲಿ ಸ್ವತಂತ್ರ ಪೂರ್ವದಲ್ಲಿ ಜಾರಿಗೆ ಬಂದ ಕಾನೂನಿದು. ಅಂದ್ರೆ ದೇಶ ಬ್ರಿಟಿಷರ ಕೈಯಲ್ಲಿದ್ದಾಗ ಬ್ರಿಟಿಷರು 1860ರಲ್ಲಿ ಭಾರತೀಯ ದಂಡ ಸಂಹಿತೆಯನ್ನು ಜಾರಿಗೆ ತರುತ್ತಾರೆ. ಅಂದು ಬ್ರಿಟಿಷರಿಗೆ ಭಾರತೀಯರನ್ನು ದಂಡಿಸುವುದೇ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ಈ ಐಪಿಸಿನಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲುವ ಬದಲು ಆರೋಪಿಗಳಿಗೆ ಶಿಕ್ಷೆ ಕೊಡಿಸುವುದರಲ್ಲೇ ಈ ಕಾನೂನು ಹೆಚ್ಚು ಒತ್ತು ಕೊಡುತ್ತಿತ್ತು. ಜೊತೆಗೆ ಇದು 164 ವರ್ಷಗಳ ಅತ್ಯಂತ ಹಳೇಯ ಕಾನೂನಾಗಿತ್ತು. ಹೀಗಾಗಿ ಈ ಹಳೇಯ ಕಾನೂನನ್ನು ಇಂದಿನ ದಿನಮಾನಗಳಿಗೆ ತಕ್ಕನಾಗಿ ಬದಲಾಯಿಸಲಾಗಿದೆ. ಭಾರತೀಯರಿಗಾಗಿ ಭಾರತೀಯರೇ ಈಗ ಹೊಸ ಕಾನೂನು ಜಾರಿಗೊಳಿಸಿದ್ದಾರೆ. ಕೇವಲ ಶಿಕ್ಷೆಗೆ ಒತ್ತುಕೊಡುತ್ತಿದ್ದ ಐಪಿಸಿ ಬದಲಿಗೆ ನ್ಯಾಯ ಕೊಡಿಸಲು ಹೆಚ್ಚು ಒತ್ತು ಕೊಡುವ ಭಾರತೀಯ ನ್ಯಾಯ ಸಂಹಿತೆ ಜಾರಿಗೊಂಡಿದೆ. 

ಇದನ್ನೂ ವೀಕ್ಷಿಸಿ:  ಮತ್ತಷ್ಟು ಸಾಮ್ರಾಜ್ಯ ವಿಸ್ತರಣೆಗೆ ಮುಂದಾದ ಸತೀಶ್ ಜಾರಕಿಹೊಳಿ: ಪುತ್ರನನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ