Nov 14, 2023, 2:34 PM IST
ದಾಖಲೆಯ ದೀಪಾವಳಿಯಿಂದ ಝಗಮಗ ಅಂತ ವಿಜೃಂಭಿಸ್ತಾ ಇದೆ ರಾಮಜನ್ಮಭೂಮಿ (Ramjanmabhoomi). ದೀಪಾವಳಿ(Deepavali).. ದೀಪಗಳ ಹಬ್ಬ. ಬರೀ ದೀಪಗಳನ್ನ ಬೆಳಗೋ ಹಬ್ಬವಲ್ಲ. ಬದುಕನ್ನೂ ಬೆಳಗೋ ಹಬ್ಬ. ಅಂಧಕಾರವನ್ನ ತೊಲಗಿಸಿ, ಜ್ಞಾನದ ಬೆಳಕು ಬೆಳಗಬೇಕು ಅನ್ನೋ ಪ್ರತೀಕದ ಹಬ್ಬ. ಇಡೀ ದೇಶವೇ ಸಂಭ್ರಮ ಸಡಗರದಿಂದ ಆಚರಿಸೋ ಮಹತ್ವದ ಹಬ್ಬ. ದೀಪಾವಳಿನಾ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಕಾರಣಕ್ಕೆ ಅದ್ದೂರಿಯಾಗಿ ಆಚರಿಸ್ತಾರ. ಕೆಲವು ಕಡೆ, ಲಕ್ಷ್ಮಿ ದೇವಿ ಹಾಲ್ಗಡಲಿನಿಂದ ಜನಿಸಿ ಬಂದಳು ಅಂತ.. ಕೆಲವು ಕಡೆ, ಕೃಷ್ಣ ನರಕಾಸುರನ ವಧೆ ಮಾಡಿದ ಅಂತ. ಮತ್ತೆ ಕೆಲವೆಡೆ ಬಲೀಂದ್ರನ ವಾಮನ ತುಳಿದ ಅಂತ, ಹೀಗೆ ಹಲವು ದೈವೀಕಾರಣಗಳಿಂದ ದೀಪಾವಳಿ ಆಚರಣೆ ಮಾಡ್ತಾರೆ. ಆದ್ರೆ ಅದರ ಜೊತೆಗೆ ಮತ್ತೂ ಒಂದು ಪ್ರಮುಖ ಕಾರಣ ಇದೆ. ವರ್ಷ, 22 ಲಕ್ಷದ 23 ಸಾವಿರಕ್ಕೂ ಅಧಿಕ ದೀಪಗಳನ್ನ ಬೆಳಗಿದ್ದಾರೆ.. ಅಯೋಧ್ಯೆಗೆ(Ayodhya) ಅಯೋಧ್ಯೆಯೇ ಒಂದು ನಕ್ಷತ್ರದ ಹಾಗೆ ಮಿನುಗಿದೆ.. ಈ ಬಾರಿಯ ದೀಪೋತ್ಸವ, ಗಿನ್ನಿಸ್ ರೆಕಾರ್ಡ್ ಆಗಿಬಿಟ್ಟಿದೆ. 2017ರಿಂದಲೂ ಸರಯೂ ನದಿ ತೀರದಲ್ಲಿ ಅದ್ದೂರಿ ದೀಪೋತ್ಸವ ಕಾರ್ಯಕ್ರಮ ನಡೆಸೋದು ಒಂದು ಪದ್ಧತಿಯಾಗಿ ನಡೆದುಬಂದಿದೆ.. ದೀಪಾವಳಿ ಅಂದ್ರೆ ಪಟಾಕಿ ಅಲ್ಲ, ದೀಪೋತ್ಸವ ಅನ್ನೋ ವಾತಾವರಣ ನಿರ್ಮಾಣವಾಗಿದೆ.. ಆದ್ರೆ, ಇವತ್ತು ನಾವು ಗಮನಿಸಬೇಕಾದ ಅಸಲಿ ಕತೆ ಇರೋದು ಈ ದೀಪೋತ್ಸವದ ಬಗ್ಗೆ ಅಲ್ಲ,.. ರಾಮಮಂದಿರದ ಕಡೆ.
ಇದನ್ನೂ ವೀಕ್ಷಿಸಿ: ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!