Jul 28, 2022, 10:46 AM IST
ಜೆಮ್‌ಷೆಡ್‌ಜೀ ಟಾಟಾ, ಭಾರತೀಯ ಉದ್ಯಮಗಳ ಪಿತಾಮಹ. ಭಾರತದ ಅತಿ ಮುಖ್ಯ ಕೈಗಾರಿಕಾ ಸಾಮ್ರಾಜ್ಯದ ಸಂಸ್ಥಾಪಕ. 1839 ರಲ್ಲಿ ಪಾರ್ಸಿ ಪುರೋಹಿತ ಕುಟುಂಬದಲ್ಲಿ ಜನಿಸುತ್ತಾರೆ. ಅವರ ಪೂರ್ವಜರು ಇರಾನ್‌ನವರು. ಜೆಮ್‌ಷೆಡ್‌ಜೀ ತಂದೆ ನಸರ್‌ವಾನ್‌ಜೀ ಕುಟುಂಬದ ಸಂಪ್ರದಾಯ ಮುರಿದು ಉದ್ದಿಮೆ ಶುರು ಮಾಡುತ್ತಾರೆ. ಕುಟುಂಬ ಸಮೇತ ಮುಂಬೈಗೆ ಶಿಫ್ಟ್ ಆಗಿ ಅಲ್ಲಿ ರಫ್ತು ಕಂಪನಿ ಆರಂಭಿಸುತ್ತಾರೆ. ಮಗ ಜೆಮ್‌ಷೆಡ್‌ಜೀಗೆ ಪಾಶ್ಚಿಮಾತ್ಯ ಶಿಕ್ಷಣ ಕೊಡಿಸುತ್ತಾರೆ. ಓದು ಮುಗಿದ ಬಳಿಕ ಜೆಮ್‌ಷೆಡ್‌ಜೀ ಉದ್ಯಮಕ್ಕಿಳಿಯುತ್ತಾರೆ. ಚಾಣಾಕ್ಷ ಉದ್ಯಮಿಯಾಗಿದ್ದ ಇವರಿಗೆ ಮುಟ್ಟಿದೆಲ್ಲ ಯಶಸ್ವಿಯಾಗುತ್ತಾ ಬಂತು. ಜೆಮ್‌ಷೆಡ್‌ಪುರದಲ್ಲಿ TISCO ಉಕ್ಕಿನ ಕಾರ್ಖಾನೆ ಆರಂಭಿಸುತ್ತಾರೆ. ಮುಂದೆ ಟಾಟಾ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ಜೆಮ್‌ಷೆಡ್‌ಜೀ ಕೊಡುಗೆ ಸದಾ ಸ್ಮರಣೀಯ.