India@75: ಸ್ವಾತಂತ್ರ್ಯ ಚಳವಳಿಗೆ ಹೊಸ ಉತ್ಸಾಹ ತಂದುಕೊಟ್ಟ ಬಾರ್ಡೋಲಿ ಗ್ರಾಮ!

Jun 25, 2022, 2:50 PM IST

ಬೆಂಗಳೂರು (ಜೂನ್ 25): ಸ್ವಾತಂತ್ರ ಗಳಿಸಲು ಅಮರ ತ್ಯಾಗವನ್ನು ಮಾಡಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ದಾಖಲಾಗಿರುವ 75 ಕಥೆಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇದಾಗಿದೆ. ಬಾರ್ಡೋಲಿ (Bardoli) ಗ್ರಾಮದ ಈ ರೈತರ ಕಣ್ಣೀರೇ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಿದ್ದ ವಲ್ಲಭಬಾಯಿ ಪಟೇಲ್ ( Vallabhbhai Patel) ಅವರನ್ನು ಉಕ್ಕಿನ ಮನುಷ್ಯರನ್ನಾಗಿ ರೂಪಿಸಿತ್ತು.

ಬಾರ್ಡೋಲಿ ರೈತ ಸತ್ಯಾಗ್ರಹ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರತೆ ತಂದುಕೊಟ್ಟಂಥ ಹೋರಾಟ. ಚೌರಿಚೌರ ಹಿಂಸಾತ್ಮಕ ಘಟನೆಯ ನಂತರ, ದೇಶಾದ್ಯಂತ ಸ್ವಾತಂತ್ರ್ಯ ಚಳವಳಿಯಲ್ಲಿ ಜಡತ್ವ ತುಂಬಿತ್ತು. ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡಂಥ ಸಂದರ್ಭವದು. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ ತಂದುಕೊಟ್ಟಿದ್ದು ಇದೇ ಬಾರ್ಡೋಲಿ.

India@75: ಸ್ವಾತಂತ್ರ್ಯ ಚಳವಳಿಗಾರರ ಅಡ್ಡೆ ಕಡೂರಿನ ನಿಡಘಟ್ಟ

ಬಾರ್ಡೋಲಿ ಗುಜರಾತ್‌ನ (Gujarat) ಸೂರತ್ ಪ್ರಾಂತ್ಯದ ಒಂದು ಚಿಕ್ಕ ಹಳ್ಳಿ. ಇಲ್ಲಿ ಬ್ರಿಟಿಷ್ ಅಧಿಕಾರಿಗಳು ಭೂಕಂದಾಯವನ್ನು ದಿಢೀರನೇ ಶೇ.30ರಷ್ಟು ಏರಿಸಿಬಿಟ್ಟಿದ್ದರು. ಅಹಮದಾಬಾದ್ ಮುನ್ಸಿಪಲ್ ಅಧ್ಯಕ್ಷರಾಗಿದ್ದ ವಲ್ಲಭಬಾಯಿ ಪಟೇಲ್ ಬಾರ್ಡೋಲಿಗೆ ಬಂದು ರೈತರನ್ನು ಸಂಘಟಿಸಿದ್ದರು. ಗಾಂಧೀಜಿಯವರ ಸಲಹೆಯಂತೆ ಬ್ರಿಟಿಷರಿಗೆ ಕಂದಾಯ ಕಟ್ಟದೆ ರೈತರೊಂದಿಗೆ ಸತ್ಯಾಗ್ರಹವನ್ನು ಆರಂಭಿಸಿದ್ದರು.