India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ

Jul 25, 2022, 5:29 PM IST

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ಅತ್ಯಂತ ಜನಪ್ರಿಯರಾದವರು ಭಗತ್ ಸಿಂಗ್ (Bhagat Singh). ಪಂಜಾಬ್‌ನ ಲೈಲಾಪುರದ ಭಂಗಾ ಗ್ರಾಮದಲ್ಲಿ 1907 ರಲ್ಲಿ ಹುಟ್ಟುತ್ತಾರೆ. ಚಿಕ್ಕಂದಿನಿಂದಲೇ ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಣೆ. ಲಾಹೋರ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಲಾಲಾ ಲಜಪತ್‌ರಾಯ್ ಜೊತೆ ಒಡನಾಟ ಬೆಳೆಸುತ್ತಾರೆ. ಮುಂದೆ ಉಗ್ರ ರಾಷ್ಟ್ರೀಯವಾದದಲ್ಲಿ ನಂಬಿಕೆ ಇಡುತ್ತಾರೆ. ಮುಂದೆ ಲಾಲಾಲಜಪತ್ ರಾಯ್ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪುತ್ತಾರೆ. ಈ ಘಟನೆ ಭಗತ್‌ ಸಿಂಗ್‌ರನ್ನು ಬಹುವಾಗಿ ಕಾಡುತ್ತದೆ. ಆಗ ಬ್ರಿಟಿಷರ ವಿರುದ್ದ ರೊಚ್ಚು ಹೆಚ್ಚಾಗುತ್ತದೆ. ದೆಹಲಿಯ ಸಂಸತ್ ಭವನಕ್ಕೆ ಭಗತ್ ಸಿಂಗ್, ಬಟುಕೇಶ್ವರ್ ದತ್ ಬಾಂಬ್ ದಾಳಿ ನಡೆಸುತ್ತಾರೆ. 

India@75:ಸಂಸತ್‌ನಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದ ತರುಣ ಬಟುಕೇಶ್ವರ್ ದತ್