India@75: ವಿದೇಶದಲ್ಲಿ ಮೊದಲ ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೇಡಂ ಕಾಮಾ

Jun 15, 2022, 4:18 PM IST

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

India@75:ಬ್ರಿಟಿಷರ ವಿರುದ್ಧ ಹೋರಾಡಿದ ಹಿಂದುಳಿದ ಜಾತಿಯ ವೀರ ಮಹಿಳೆಯರು

ವಿದೇಶಿ ನೆಲದಲ್ಲಿ ಮೊದಲ ಬಾರಿ ತ್ರಿವರ್ಣ ಧ್ವಜ (National Flag) ಹಾರಿಸಿ, ಭಾರತದೆಡೆ ಜಗತ್ತು ನೋಡುವಂತೆ ಮಾಡಿದವರು ಮೇಡಂ ಕಾಮಾ. ಭಿಕಾಜಿ ರುಸ್ತಮ್ ಕಾಮಾ (Madam Bhikaji Cama)  ಅಥವಾ ಮೇಡಂ ಕಾಮಾ ಮಹಿಳಾ ಹಕ್ಕು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಾಕೆ. 1861 ರಲ್ಲಿ ಬಾಂಬೆಯ ಪಾರ್ಸಿ ಶ್ರೀಮಂತ ಕುಟುಂಬದಲ್ಲಿ ಜನಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಂಬೆಗೆ ಪ್ಲೇಗ್, ಬರಗಾಲ ವಕ್ಕರಿಸಿದಾಗ ಕಾರ್ಯಕರ್ತೆಯಾಗಿ ಕೆಲಸ ಮಾಡಿದವರು. ಇದರಿಂದ ಕಾಮಾಗೆ ಪ್ಲೇಗ್ ಅಂಟಿಕೊಂಡು ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಬೇಕಾಯಿತು. ಅಲ್ಲಿ ದಾದಾಬಾಯಿ ನವರೋಜಿ ಭೇಟಿಯಾಗುತ್ತದೆ. ನಂತರ ಸ್ವತಂತ್ರ ಹೋರಾಟ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಮುಂದೆ ಇವರ ಸ್ವತಂತ್ರ ಹೋರಾಟದ ಹಾದಿ ಹೇಗಿತ್ತು ನೋಡೋಣ