India@75: ಬ್ರಿಟಿಷರ ವಿರುದ್ಧ ಯೋಧನಂತೆ ಸಮವಸ್ತ್ರ ಧರಿಸಿ ಹೋರಾಡಿದ ಕ್ಯಾ. ಲಕ್ಷ್ಮೀ

Jul 7, 2022, 5:39 PM IST

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. ಬ್ರಿಟಿಷರ ವಿರುದ್ಧ ಸಮವಸ್ತ್ರ ಧರಿಸಿ, ಯೋಧನಂತೆ ಹೋರಾಡಿದ ಕ್ಯಾ. ಲಕ್ಷ್ಮೀಯ (Capt. Lakshmi) ಸಾಹಸಗಾಥೆ ಇದು. 

India@75:ವಿದೇಶದಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿ ಕಟ್ಟಿದ ಬೋಸ್ ರಾಶ್ ಬಿಹಾರಿ ಬೋಸ್

ಹುಟ್ಟಿದ್ದು ಕೇರಳದ ಜಮೀನ್ದಾರಿ ಮನೆತನದಲ್ಲಿ, ಶ್ರೀಮಂತ ನ್ಯಾಯವಾದಿ ಎಸ್ ಸ್ವಾಮಿನಾಥನ್ ಮಗಳು, ಓದಿನಲ್ಲಿ ಬುದ್ದಿವಂತೆ, ನೋಡುವುದಕ್ಕೆ ಅಪೂರ್ವ ಸುಂದರಿ, ಆಯ್ಕೆ ಮಾಡಿಕೊಂಡಿದ್ದು ಕಷ್ಟದ ಹಾದಿ. ಇದು  ಕ್ಯಾ. ಲಕ್ಷ್ಮೀಯ ಸಾಹಸಗಾಥೆ. ವೈದ್ಯಕೀಯ ಪಡೆದ ಬಳಿಕ ಲಕ್ಷ್ಮೀ ನೇತಾಜಿ ಸುಭಾಷ್ ಚಂದ್ರ ಬೋಸ್‌ರನ್ನು ಭೇಟಿಯಾಗುತ್ತಾರೆ. INA ಬಗ್ಗೆ ಆಸಕ್ತಿ ತಾಳುತ್ತಾರೆ. ಕೂಡಲೇ ನೇತಾಜಿ, ಲಕ್ಷ್ಮೀಯವರನ್ನು ಐಎನ್‌ಎಗೆ  ಪ್ರಮುಖರನ್ನಾಗಿ ಮಾಡುತ್ತಾರೆ. ಅಲ್ಲಿಂದ ಇವರ ಹೋರಾಟದ ಹಾದಿ ಶುರುವಾಗುತ್ತದೆ.