India@75: ಸ್ವಾತಂತ್ರ ಹೋರಾಟದ ಪ್ರಮುಖ ನಾಯಕಿಯಾಗಿ ಬೆಳೆದ ಆಬಾದಿ ಬಾನು ಬೇಗಂ.!

Jun 4, 2022, 4:20 PM IST

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಮೌಲಾನಾ ಮಹಮ್ಮದ್ ಅಲಿ, ಮೌಲಾನಾ ಶೌಕತ್ ಅಇ ಮಹಾತ್ಮ ಗಾಂಧೀಜಿ ಜೊತೆ ಅಸಹಕಾರ ಚಳವಳಿ, ಖಿಲಾಫತ್ ಚಳವಳಿಗಳಲ್ಲಿ ಭಾಗಿಯಾದವರು. ಇವರ ತಾಯಿ ಅಬಾದಿ ಬಾನು ಬೇಗಂ ಕೂಡಾ ಸ್ವತಂತ್ರ ಹೋರಾಟಗಾರ್ತಿ. ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುತ್ತಾರೆ. ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಂಡು ಇಂಗ್ಲೀಷ್ ಶಾಲೆಗೆ ಕಳುಹಿಸುತ್ತಾರೆ. ಇವರೂ ಕೂಡಾ ಗಾಂಧೀಜಿ ಜೊತೆ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುತ್ತಾರೆ. ತನ್ನ 74 ನೇ ವಯಸ್ಸಿನವರೆಗೂ ಹೋರಾಟದಲ್ಲಿ ಸಕ್ರಿಯವಾಗಿದ್ದರು.