India@75:ಕರ್ನಾಟಕದ ಕೇಸರಿ ಗಂಗಾಧರ್ ರಾವ್ ದೇಶಪಾಂಡೆ ಜೀವನಗಾಥೆ

Jul 29, 2022, 3:56 PM IST

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಏಷ್ಯಾನೆಟ್ ಸ್ಮರಿಸಿಕೊಳ್ಳುತ್ತಿದೆ. 

India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!

ಬೆಳಗಾವಿಯ ಗಂಗಾಧರ್ ರಾವ್ ದೇಶಪಾಂಡೆ (Gangadhar rao Deshapande) ಕರ್ನಾಟಕದ ಕೇಸರಿ ಎಂದೇ ಹೆಸರಾದವರು. ಸ್ವದೇಶಿ ಚಳವಳಿಯಲ್ಲಿ ಭಾಗಿಯಾಗುವ ಇವರು ತಿಲಕರ ಕಟ್ಟಾ ಅನುಯಾಯಿ ಆಗಿರುತ್ತಾರೆ. ಬೆಳಗಾವಿಯಲ್ಲಿ ಗಣೇಶ ಹಬ್ಬ ಆಯೋಜಿಸುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಮುಂದೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಸಹಕಾರ ನೀಡುತ್ತಾರೆ. ನಂತರ ಗಾಂಧೀಜಿಯ ಹೆಜ್ಜೆಯಲ್ಲೇ ಸಾಗುತ್ತಾರೆ. ಮೈಸೂರಿನಲ್ಲಿ ಕಾನೂನು ಉಲ್ಲಂಘನೆ ಮಾಡುವ ಚಳವಳಿಯ ನೇತೃತ್ವ ವಹಿಸುತ್ತಾರೆ. ಇದಕ್ಕಾಗಿ ಜೈಲಿಗೆ ಹೋಗುತ್ತಾರೆ. ಆ ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಭಾಗಿಯಾಗಿ ಜೈಲು ಸೇರುತ್ತಾರೆ. ನಮ್ಮ ಸ್ವತಂತ್ರ್ಯ ಹೋರಾಟಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ದೇಶಪಾಂಡೆ ಅವರಿಗೆ ಸಿಗಬೇಕಾದ ಮನ್ನಣೆ ಇವತ್ತಿಗೂ ಸಿಗದೇ ಇರುವುದು ವಿಪರ್ಯಾಸ..