Aug 3, 2022, 11:20 AM IST
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ತಮಿಳುನಾಡಿನ ಮಧುರೈನ ಜನ ರೊಸಪ್ಪೋ ದೊರೈ ಎಂದು ಪ್ರೀತಿಯಿಂದ ಕರೆಯುವ ಕೇರಳಿಗನೆಂದರೆ ಅದು ಬ್ಯಾರಿಸ್ಟರ್ ಜಾರ್ಜ್ ಜೊಸೆಫ್. ಪ್ರಸಿದ್ಧ ಸ್ವತಂತ್ರ್ಯ ಹೋರಾಟಗಾರ, ಜನಪ್ರಿಯ ವಕೀಲ, ಗಾಂಧೀಜಿ ಅನುಯಾಯಿ. ಇಂಗ್ಲೆಂಡ್‌ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ಮೇಡಂ ಕಾಮಾ, ಕೃಷ್ಣ ವರ್ಮಾ, ವಿ ಡಿ ಸಾವರ್ಕರ್ ಜೊತೆ ಸಂಪರ್ಕವಾಗುತ್ತದೆ. ಭಾರತಕ್ಕೆ ವಾಪಸ್ಸಾದ ಬಳಿಕ ವಕೀಲಿ ವೃತ್ತಿ ಆರಂಭಿಸುತ್ತದೆ. ಬ್ರಿಟಿಷರು ಜಾರಿಗೆ ತಂದ 'ಕ್ರಿಮಿನಲ್ ಟ್ರೈಬ್ಸ್ ಆಕ್ಟ್' ವಿರುದ್ಧ ಆದಿವಾಸಿಗಳು ಹೋರಾಟ ಶುರು ಮಾಡುತ್ತಾರೆ. ಅಗ ಜಾರ್ಜ್ ಜೊಸೆಫ್ ಅದಿವಾಸಿಗಳ ಪರವಾಗಿ ಕೋರ್ಟ್‌ನೊಳಗೆ ವಾದಿಸುತ್ತಾರೆ. ಜನರನ್ನು ಸಂಘಟಿಸುತ್ತಾರೆ. ಆದಿವಾಸಿಗಳಿಗೆ ಹತ್ತಿರವಾಗುತ್ತಾರೆ. ಜೊಸೇಫ್ ಅವರ ಕೊಡುಗೆ ಸದಾ ಸ್ಮರಣೀಯ.
India@75:ಭಾರತದಲ್ಲಿ ಆಧುನಿಕ ಉದ್ಯಮಗಳ ಮೂಲಪುರುಷರಲ್ಲಿ ಪ್ರಮುಖರಾದವರು ಜೆಮ್‌ಷೆಡ್‌ಜೀ ಟಾಟಾ