India@75: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆ ರಚನೆಯಾಗಿದ್ಹೇಗೆ?

Jun 12, 2022, 4:36 PM IST

ಭಾರತ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದ ವೀರ ಯೋಧರ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಸ್ತುತ ಪಡಿಸಿದೆ. 

India@75: 18 ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯರಲ್ಲಿ ಪ್ರತಿರೋಧ ಹುಟ್ಟಿಸಿ, ಸ್ವಾಭಿಮಾನ ಹೆಚ್ಚಿಸುವಲ್ಲಿ ಅನೇಕ ಸಾಹಿತ್ಯ ಕೃತಿಗಳು ಪ್ರಮುಖ ಪಾತ್ರ ವಹಿಸಿವೆ. ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಬರಹಗಾರರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಯರು ಒಬ್ಬರು. 1882 ರಲ್ಲಿ ಪ್ರಕಟವಾದ 'ಆನಂದ ಮಠ'ಕಾದಂಬರಿ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಿಡಿದೇಳುವ ಹಾಗೆ ರಾಷ್ಟ್ರ ಪ್ರಜ್ಞೆ ಮೂಡಿಸಲಾಯಿತು. ಇದರಲ್ಲಿನ ವಂದೇ ಮಾತರಂ ಕವಿತೆ ಹೋರಾಟಗಾರರ ಪಾಲಿಗೆ ರಾಷ್ಟ್ರಗೀತೆಯಾಯಿತು. ಈ ಕವಿಗೆ ರಾಗಸಂಯೋಜನೆ ಮಾಡಿದ್ದು ರವೀಂದ್ರ ನಾಥ್ ಟ್ಯಾಗೋರ್. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಹೋರಾಟದ ಹಾದಿ, ಧೋರಣೆ ಹೇಗಿತ್ತು..? ಸ್ವತಂತ್ರ ಹೋರಾಟದಲ್ಲಿ ಇವರ ಪಾತ್ರವೇನು..? ನೋಡೋಣ